ಲೋಕಸಭಾ ಚುನಾವಣೆ 2019 ರ ಜನಾದೇಶ ಹೊರ ಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೋದಿಯ ಅಭೂತಪೂರ್ವ ಗೆಲುವಿಗೆ ದೇಶಾದ್ಯಂತ ಸಂಭ್ರಮ ವ್ಯಕ್ತವಾಗುತ್ತದೆ. ನಟ ವಿವೇಕ್ ಒಬೆರಾಯ್ ಮೋದಿ ಗೆಲುವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದ್ದಾರೆ. 

ಮೋದಿ ಗೆಲುವಿಗೆ ಮನೆ ಹೊರಗಡೆ ಚಹಾ ಹಂಚಿ ಸಂಭ್ರಮಿಸಿದ್ದಾರೆ. ವಿವೇಕ್ ಒಬೆರಾಯ್ ಗೆ ತಂದೆ ಸುರೇಶ್ ಒಬೆರಾಯ್, ಪತ್ನಿ ಪ್ರಿಯಾಂಕ ಸಾಥ್ ನೀಡಿದ್ದಾರೆ. 

ಮೋದಿ ಬಯೋಪಿಕ್ ನಲ್ಲಿ ಕಾಣಿಸಿಕೊಂಡಿರುವ ವಿವೇಕ್ ಒಬೆರಾಯ್ ಚಿತ್ರ ರಿಲೀಸ್ ಮಾಡಲು ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ರಿಲೀಸ್ ಮಾಡಲು ಅಡೆತಡೆಗಳು ಎದುರಾಗಿತ್ತು. ಈಗ ಮೋದಿ ಗೆಲುವಿನಿಂದ ವಿವೇಕ್ ಒಬೆರಾಯ್ ಫುಲ್ ಖುಷ್ ಹುವಾ!