ವಿರಾಟ್ ಕೊಹ್ಲಿ ತಮ್ಮ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮ ಜೊತೆ ಜ. 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ತಳ್ಳಿಹಾಕಿದ್ದಾರೆ.
ನವದೆಹಲಿ (ಡಿ. 30): ವಿರಾಟ್ ಕೊಹ್ಲಿ ತಮ್ಮ ಗರ್ಲ್ ಫ್ರೆಂಡ್ ಅನುಷ್ಕಾ ಶರ್ಮ ಜೊತೆ ಜ. 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯನ್ನು ಸ್ವತಃ ವಿರಾಟ್ ಕೊಹ್ಲಿ ತಳ್ಳಿಹಾಕಿದ್ದಾರೆ.
ನಾವು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಮಾಡಿಕೊಳ್ಳುವುದಾದರೆ ಮುಚ್ಚಿಡುತ್ತಿರಲಿಲ್ಲವೆಂದು ಟ್ವೀಟಿಸಿದ್ದಾರೆ.
ಸುದ್ದಿವಾಹಿಗಳು ಸುಳ್ಳು ಸುದ್ದಿಯನ್ನು, ವದಂತಿಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಲಾಗುವುದಿಲ್ಲ. ನಿಮ್ಮನ್ನು ಗೊಂದಲಕ್ಕೀಡು ಮಾಡಿದ್ದಾರೆ. ಈ ಗೊಂದಲಕ್ಕೆ ನಾವು ಸ್ಪಷ್ಟೀಕರಣ ನೀಡುವ ಮೂಲಕ ತೆರೆ ಎಳೆಯುತ್ತಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ.
