8 ಪ್ಯಾಕ್ ಗಂಡುಗಲಿ ಆಗಲು ಹೊರಟಿದ್ದಾರೆ ವಿನೋದ್ ಪ್ರಭಾಕರ್

entertainment | Monday, March 26th, 2018
Suvarna Web Desk
Highlights

ಟೈಗರ್ ಪ್ರಭಾಕರ್ ಕಾಲಕ್ಕೆ ಈ ಆರು ಎಂಟು ಪ್ಯಾಕುಗಳ ಷೋಕಿ ಇರಲಿಲ್ಲ. ಒಬ್ಬ ಖಳನಟನೋ ನಾಯಕನಟನೋ ಅಭಿನಯದಲ್ಲೇ ತನ್ನ ಖದರು ತೋರಿಸುತ್ತಿದ್ದ. ಈಗ ಹಾಗಲ್ಲ, ನಟನ ಮೈಕಟ್ಟೂ ಮ್ಯಾಟರ್ಸ್. ಇದೀಗ ಟೈಗರ್ ಪ್ರಭಾಕರ್ ಮಗ ವಿನೋದ್ 8 ಪ್ಯಾಕ್ ಗಂಡುಗಲಿ ಆಗುವುದಕ್ಕೆ ಹೊರಟಿದ್ದಾರೆ.

ಬೆಂಗಳೂರು (ಮಾ.26):  ಟೈಗರ್ ಪ್ರಭಾಕರ್ ಕಾಲಕ್ಕೆ ಈ ಆರು ಎಂಟು ಪ್ಯಾಕುಗಳ ಷೋಕಿ ಇರಲಿಲ್ಲ. ಒಬ್ಬ ಖಳನಟನೋ ನಾಯಕನಟನೋ ಅಭಿನಯದಲ್ಲೇ ತನ್ನ ಖದರು ತೋರಿಸುತ್ತಿದ್ದ. ಈಗ ಹಾಗಲ್ಲ, ನಟನ ಮೈಕಟ್ಟೂ ಮ್ಯಾಟರ್ಸ್. ಇದೀಗ ಟೈಗರ್ ಪ್ರಭಾಕರ್ ಮಗ ವಿನೋದ್ 8 ಪ್ಯಾಕ್ ಗಂಡುಗಲಿ ಆಗುವುದಕ್ಕೆ ಹೊರಟಿದ್ದಾರೆ.

ಅಪ್ಪನಷ್ಟೇ ಹಟಮಾರಿಯೂ ಆಗಿರುವ ಅವರಷ್ಟೇ ಛಲಗಾರನೂ ಹೌದು ಅನ್ನುವುದಕ್ಕೆ ಇದೇ ಸಾಕ್ಷಿ. ಪ್ರಭಾಕರ್ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಿಯೇ ಸಾಧಿಸುತ್ತಿದ್ದರು. ಯಾವ ನೋವನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿದ್ದರು. ಈಗ ಅಂಥದ್ದೇ ಸಾಧನೆಯನ್ನು ವಿನೋದ್ ಮಾಡಿ ತೋರಿಸಿದ್ದಾರೆ. ಇದು ಆರುತಿಂಗಳ ಶ್ರಮದ ಫಲ.

‘ ನನಗೆ ತರಬೇತಿ ನೀಡಿದ್ದು ಪ್ರದೀಪ್ ಮತ್ತು ರಿಯಾಜ್. ನನ್ನ ಹೆಂಡತಿ ನಿಶಾ ಧೈರ್ಯ ತುಂಬಿದಳು. ಹೀಗಾಗಿ ಇದೆಲ್ಲವನ್ನು ಮಾಡಲು ಸಾಧ್ಯವಾಗಿದೆ. ಅಪ್ಪ ಬಾಡಿ ಬಿಲ್ಡರ್ ಆಗಿದ್ದರೂ ಈ ತರಹದಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲೇ ಹೋದರೂ ಅಭಿಮಾನಿಗಳು ನನ್ನನ್ನು ತಂದೆಗೆ ಹೋಲಿಸುತ್ತಿದ್ದರು. ಅವರನ್ನು ಮೀರಿಸುವಂತೆ ಏನಾದರೂ ಸಾಧನೆ ಮಾಡಬೇಕೆಂದು ನಿರ್ಧರಿಸಿದ್ದೆ. ಆ ಸಂದರ್ಭದಲ್ಲಿ ’ರಗಡ್’ ಸಿನಿಮಾಕ್ಕೆ ಎಂಟು ಪ್ಯಾಕ್ ಅಗತ್ಯ ಅಂತ ನಿರ್ದೇಶಕರು ಹೇಳಿದ್ದರು. ಅಲ್ಲಿಂದ ಶುರುವಾದ ಸಾಹಸ. ಆರು ತಿಂಗಳು ತೆಗೆದುಕೊಂಡಿತು.ಈಗ ಒಂದು ಶೇಪ್ ಬಂದಿದೆ’ ಎನ್ನುತ್ತಾರೆ ವಿನೋದ್ ಪ್ರಭಾಕರ್. ಉಪ್ಪು ಇಲ್ಲದೆ ಅರ್ಧ ಬೆಂದ ತರಕಾರಿ, ಕಾಲು ಲೋಟ ನೀರು, ಮೊಟ್ಟೆ, ಸಣ್ಣದಾದ ಒಂದು ಚಿಕನ್ ಪೀಸ್ ಇಷ್ಟನ್ನೇ ಹೊತ್ತಿಗೆ ತಿನ್ನುತ್ತಿದ್ದರಂತೆ ವಿನೋದ್. ಮೂಲತಃ ಸಸ್ಯಾಹಾರಿಯಾದರೂ ಇದಕ್ಕಾಗಿಯೇ ಮಾಂಸಕ್ಕೆ ಬಾಯಿ ಹಾಕಿದ್ದಾರೆ. ಈ ಮಧ್ಯೆ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿ ಜ್ವರ ಬಂದು ಅನಾರೋಗ್ಯ ಅನುಭವಿಸಿದ್ದು ಇದೆಯಂತೆ. ಇವತ್ತು ಕನ್ನಡ ಚಿತ್ರರಂಗದಲ್ಲಿ ಎಂಟು ಪ್ಯಾಕ್ಸ್ ಹೀರೋ ಅವರೊಬ್ಬರೇ. ಈ ೮ ಪ್ಯಾಕ್ ಚಿತ್ರ ಸೆರೆಹಿಡಿದವರು ಗಿರಿಧರ್ ದಿವಾನ್. 

Comments 0
Add Comment

    ಐಶ್ವರ್ಯ ರೈ ಅಂತಹದೇನು ತಪ್ಪು ಮಾಡಿದ್ರು !

    entertainment | Tuesday, May 22nd, 2018