ಸೈನಿಕರಿಗಾಗಿ ರೊಟ್ಟಿ ತಟ್ಟಿದ ಉರಿ ಚಿತ್ರದ ನಟ | ಇಂಡೋ- ಚೈನಾ ಗಡಿಯಲ್ಲಿರುವ ತವಾಂಗ್ ಭಾಗದ ಸೈನಿಕರ ಜೊತೆ ಕಾಲ ಕಳೆದ ವಿಕ್ಕಿ ಕೌಶಲ್ 

ಭಾರತೀಯ ಸೇನೆ ಬಗ್ಗೆ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೆಮ್ಮೆಪಡುವಂತೆ ಮಾಡಿದ ಸಿನಿಮಾ ಉರಿ. ಈ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಇಂಡೋ- ಚೀನಾ ಬಾರ್ಡರ್ ನಲ್ಲಿರುವ ತವಾಂಗ್ ಭಾಗದ ಸೈನಿಕರಿಗೆ ರೊಟ್ಟಿ ಮಾಡಿಕೊಟ್ಟು ಗಮನ ಸೆಳೆದಿದ್ದಾರೆ. ಮಿಲಿಟರಿ ಯೂನಿಫಾರ್ಮ್ ಹಾಕಿಕೊಂಡು ಸೈನಿಕರ ಒಂದಷ್ಟು ಸಮಯ ಕಳೆದಿದ್ದಾರೆ. 

View post on Instagram

" ಮೊದಲ ಬಾರಿ ರೊಟ್ಟಿ ತಟ್ಟಿದ್ದೇನೆ. ಸೇನೆಗೋಸ್ಕರ ಮಾಡುತ್ತಿರುವುದಕ್ಕೆ ಖುಷಿಯಾಗುತ್ತದೆ" ಎಂದು ಬರೆದುಕೊಂಡಿದ್ದಾರೆ. 

ವಿಕ್ಕಿ ಕೌಶಲ್ ತಕ್ತ್, ಭೂತ್ ಪಾರ್ಟ್ ಒನ್- ದಿ ಹಂಟೆಡ್ ಶಿಪ್ ಹಾಗೂ ಇನ್ನು ಹೆಸರಿಡದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.