Asianet Suvarna News Asianet Suvarna News

ಉಪ್ಪಿ ಮುಂಬರುವ ಚಿತ್ರ ಯಾವುದು?

ನಾನು ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗುತ್ತೇನೆ ಅಂತ ಎಲ್ಲೂ ಹೇಳಿಲ್ಲವಲ್ಲ! ಸಿನಿಮಾ ನನ್ನ ವೃತ್ತಿ. ಪ್ರಜಾಕೀಯ ನನ್ನ ಕನಸು ಮತ್ತು ಗುರಿ. ಪ್ರಜಾಕೀಯ ಉಪೇಂದ್ರನೇ ಬೇರೆ, ಸಿನಿಮಾ ಉಪೇಂದ್ರನೇ ಬೇರೆ.  

ಐದು ಸಿನಿಮಾಗಳು ಕೈಯಲ್ಲಿವೆ. ‘ಐ ಲವ್ ಯೂ’ ಚಿತ್ರದ ನಂತರ ಕನಕಪುರ ಶ್ರೀನಿವಾಸ್ ನಿರ್ಮಾಣದ, ಹೊಸ ಹುಡುಗ ಸಂತೋಷ್ ನಿರ್ದೇಶಿಸುತ್ತಿರುವ ‘ಅಧೀರ’ ಚಿತ್ರ ಶುರುವಾಗಲಿದೆ. ಇದಾದ ನಂತರ ಕೆ ಮಂಜು ನಿರ್ಮಾಣದ ಚಿತ್ರ, ಅದರ ನಂತರ ಮೈಸೂರಿನ ಹೊಸ ನಿರ್ಮಾಪಕರ ಸಿನಿಮಾವೊಂದು ಸೆಟ್ಟೇರಲಿದೆ. ಇದರ ಜತೆಗೆ ಈ ಹಿಂದೆಯೇ ಶುರು ಮಾಡಿದ ‘ಮೋದಿ’ ಹೆಸರಿನ ಸಿನಿಮಾ ಕೂಡ ಇದೆ. ಇಷ್ಟು ಸಿನಿಮಾಗಳ ನಡುವೆ ನನ್ನ ನಿರ್ದೇಶನದ ಸಿನಿಮಾ ಕೂಡ ಆರಂಭಿಸಬೇಕಿದೆ.
 
Upendra Upcoming movie

ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಮುಂದಿನ ಚಿತ್ರದ ಬಗ್ಗೆ, ಪ್ರಜಾಕೀಯದ ಬಗ್ಗೆ, ರಾಜಕಾಋಣದ ಬಗ್ಗೆ ಕನ್ನಡ ಪ್ರಭ ದೊಡನೆ ಮಾತನಾಡಿದ್ದಾರೆ. 

ಉಪೇಂದ್ರ ಇನ್ನೂ ರಾಜಕೀಯಕ್ಕೆ ಸೀಮಿತ ಅನ್ನೋರಿಗೆ ಈಗ ಉತ್ತರ ಸಿಕ್ಕಿರಬಹುದಲ್ಲ?

ನಾನು ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋಗುತ್ತೇನೆ ಅಂತ ಎಲ್ಲೂ ಹೇಳಿಲ್ಲವಲ್ಲ! ಸಿನಿಮಾ ನನ್ನ ವೃತ್ತಿ. ಪ್ರಜಾಕೀಯ ನನ್ನ ಕನಸು ಮತ್ತು ಗುರಿ. ಪ್ರಜಾಕೀಯ ಉಪೇಂದ್ರನೇ ಬೇರೆ, ಸಿನಿಮಾ ಉಪೇಂದ್ರನೇ ಬೇರೆ. 

ಐ ಲವ್‌ ಯೂ ಸಿನಿಮಾ ನಿಮಗೆ ಇಷ್ಟವಾಗಲಿಕ್ಕೆ ಕಾರಣಗಳೇನು?

ಚಿತ್ರಕಥೆಯ ಜತೆಗೆ ನನ್ನದೇ ಸಿನಿಮಾಗಳನ್ನು ಬಳಸಿಕೊಂಡು ಈ ಜನರೇಷನ್‌ಗೆ ಹೇಳುವುದಕ್ಕೆ ಹೊರಟಿರುವ ಹೊಸ ಪ್ರೇಮ ಕತೆ. ಚಿತ್ರದ ಶೀರ್ಷಿಕೆಯಲ್ಲಿರುವ ಕೈ ಸಿಂಬಲ್ ಡಂಬ್ ಆ್ಯಂಡ್ ಡೆಫ್‌ನವರು ಬಳಸುವ ಲವ್ ಕೋಡ್ ಅಂತೆ.

ಈ ಸಿನಿಮಾ ನಂತರ ಮುಂದಿನ ಚಿತ್ರಗಳು ಯಾವುವು?

ಐದು ಸಿನಿಮಾಗಳು ಕೈಯಲ್ಲಿವೆ. ‘ಐ ಲವ್ ಯೂ’ ಚಿತ್ರದ ನಂತರ ಕನಕಪುರ ಶ್ರೀನಿವಾಸ್ ನಿರ್ಮಾಣದ, ಹೊಸ ಹುಡುಗ ಸಂತೋಷ್ ನಿರ್ದೇಶಿಸುತ್ತಿರುವ ‘ಅಧೀರ’ ಚಿತ್ರ ಶುರುವಾಗಲಿದೆ. ಇದಾದ ನಂತರ ಕೆ ಮಂಜು ನಿರ್ಮಾಣದ ಚಿತ್ರ, ಅದರ ನಂತರ ಮೈಸೂರಿನ ಹೊಸ ನಿರ್ಮಾಪಕರ ಸಿನಿಮಾವೊಂದು ಸೆಟ್ಟೇರಲಿದೆ. ಇದರ ಜತೆಗೆ ಈ ಹಿಂದೆಯೇ ಶುರು ಮಾಡಿದ ‘ಮೋದಿ’ ಹೆಸರಿನ ಸಿನಿಮಾ ಕೂಡ ಇದೆ. ಇಷ್ಟು ಸಿನಿಮಾಗಳ ನಡುವೆ ನನ್ನ ನಿರ್ದೇಶನದ ಸಿನಿಮಾ ಕೂಡ ಆರಂಭಿಸಬೇಕಿದೆ.

ನಿಮ್ಮ ಅಣ್ಣನ ಪುತ್ರ ನಿರಂಜನೆ ನಟನೆಯ ಮೊದಲ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರ ನೋಡಿದ್ದೀರಾ?

ಹೌದು, ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ನಿರಂಜನ್ ಒಳ್ಳೆಯ ಕಲಾವಿದ ಆಗುತ್ತಾನೆಂಬ ನಂಬಿಕೆ ಮೂಡಿಸಿದೆ. ನಿರ್ದೇಶಕ ಯೋಗಿ ದೇವಗಂಗೆ ಹೊಸ ರೀತಿಯ ಕತೆಯೊಂದನ್ನು ಹೇಳಿದ್ದಾರೆ. ನಿರಂಜನ್‌ಗೆ ಪಾಲಿಗೆ ‘ಸೆಕೆಂಡ್ ಹಾಫ್’ ಉತ್ತಮ ಸಿನಿಮಾ. ಈ ಸಿನಿಮಾದಲ್ಲಿ ಅವನ ನಟನೆ ನೋಡಿ ನಾನೇ ಅವನಿಗೆ ಸಿನಿಮಾ ಮಾಡಬೇಕೆಂಬ ವಿಶ್ವಾಸ ಮತ್ತು ಭರವಸೆ ಮೂಡಿದೆ. ಎರಡ್ಮೂರು ಸಿನಿಮಾಗಳಲ್ಲಿ ನಟಿಸಿದ ಮೇಲೆ ನನ್ನ ನಿರ್ದೇಶನದಲ್ಲೂ ನಿರಂಜನ್‌ಗೆ ಚಿತ್ರ ಮಾಡುವೆ. 

ಸೆಕೆಂಡ್ ಹಾಫ್‌ನಲ್ಲಿ ಪ್ರಿಯಾಂಕ ಅವರ ಕಾನ್‌ಸ್ಟೇಬಲ್ ಪಾತ್ರಕ್ಕೆ ನಿಮ್ಮ ಸಲಹೆಯೂ ಇದೆಯಂತೆ?

ಹೌದು. ಯೋಗಿದೇವಗಂಗೆ ಬಂದು ಕತೆ ಹೇಳಿದಾಗ, ‘ನೋಡು ಇದು ನಿನಗೆ ಸೂಟ್ ಆಗೋ ಕತೆ. ಮಾಡು ಒಳ್ಳೆಯ ಸಿನಿಮಾ ಆಗುತ್ತದೆ’ ಅಂತ ಹೇಳಿದ್ದೆ. ಜತೆಗೆ ತೂಕ ಇಳಿಸಿಕೊಳ್ಳುವುದಕ್ಕೆ ಸಲಹೆ ನೀಡಿದ್ದೆ. ಪ್ರಿಯಾಂಕ ಪೊಲೀಸ್ ಗೆಟಪ್ ಹಾಕಿಕೊಂಡು ನನ್ನ ಮುಂದೆ ನಿಂತಾಗ ನಾನೇ ಥ್ರಿಲ್ ಆದೆ. ಮಹಿಳಾ ಪೊಲೀಸ್ ಪೇದೆ ಹೇಗಿರಬೇಕು ಎಂದರೆ ಪ್ರಿಯಾಂಕ ಅವರನ್ನು ತೋರಿಸಬೇಕು ಅನ್ನುವಷ್ಟರ ಮಟ್ಟಿಗೆ ಪಾತ್ರ ಮಾಡಿದ್ದಾರೆ. ಜೂನ್ ೧ರಂದು ತೆರೆಗೆ ಬರುತ್ತಿದೆ. ಜನ ಸ್ವೀಕರಿಸಬೇಕಷ್ಟೇ.  

Follow Us:
Download App:
  • android
  • ios