ಮೈಕೋ‌ ಕಂಪನಿಯಲ್ಲಿ ಹೆಚ್.ಆರ್. ಮ್ಯಾನೇಜರ್ ಆಗಿರುವ ನವೀನ್ ಅವರ ಚಾರ್ಟ್ ನಂತೆ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ
ಪ್ರಜಾಕೀಯ ಸೂತ್ರದಿಂದ ಪಕ್ಷ ಕಟ್ಟಿ ಅಧಿಕಾರ ಹಿಡಿಯಬೇಕು ಅಂತಾ ಪಣ ತೊಟ್ಟಿರುವ ಚಿತ್ರನಟ, ಕೆಪಿಜೆಪಿ ಪಕ್ಷದ ಗೌರವಾಧ್ಯಕ್ಷ ಉಪೇಂದ್ರ ಇಂದು ತಮ್ಮ ಪಕ್ಷದ ಆ್ಯಪ್ ಬಿಡುಗಡೆ ಮಾಡಿದರು. ಮೈಕೋ ಕಂಪನಿಯಲ್ಲಿ ಹೆಚ್.ಆರ್. ಮ್ಯಾನೇಜರ್ ಆಗಿರುವ ನವೀನ್ ಅವರ ಚಾರ್ಟ್ ನಂತೆ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ. ಇದೇ ವೇಳೆ ವೇದಿಕೆ ಮೇಲಿನ ಕುರ್ಚಿಗಳನ್ನು ಖಾಲಿ ಇಟ್ಟಿದ್ದ ಉಪೇಂದ್ರ, ಈ ಕುರ್ಚಿಗಳು ಮುಂದಿನ ನಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಮೀಸಲು ಅಂತಾ ಹೇಳಿದರು.
ಉಪೇಂದ್ರ ಅವರು ಬಿಡುಗಡೆ ಮಾಡಿರುವ ಆ್ಯಪ್'ನಲ್ಲಿ ಪ್ರಜಾಕೀಯ ಪಕ್ಷದ ವಿವರಗಳು,ವೆಬ್'ಸೈಟ್, ಸುದ್ದಿಗಳು, ಸಾರ್ವಜನಿಕರು ಉಪ್ಪಿಯನ್ನು ನೇರವಾಗಿ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕಿಸುವುದು. ನಿಮ್ಮ ಚುನಾವಣಾ ಗುರುತಿನ ಚೀಟಿಯನ್ನು ಪರಿಶೀಲಿಸುವ ಮಾಹಿತಿ ಮುಂತಾದ ವಿವರಗಳಿವೆ.
