Asianet Suvarna News Asianet Suvarna News

ಭಾರತದ ಬಿಯರ್ ಕಿಕ್‌ಗೆ ಬಟ್ಟೆ ಮರೆತ ಚೀನಿಯರು!

ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದರಂತೆ.

Two Chinese, drunk and naked, ram SUV into another car at Meerut
Author
Bengaluru, First Published Sep 19, 2018, 4:33 PM IST
  • Facebook
  • Twitter
  • Whatsapp

ಮೀರತ್[ಸೆ.19]: ರಸ್ತೆ ಅಪಘಾತದ ವೇಳೆ ಡಿಕ್ಕಿಗೊಳಗಾದ ವಾಹನ ಚಾಲಕರು ಕೈ ಕೈ ಮಿಲಾಯಿಸುವುದು ಸಾಮಾನ್ಯ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕನ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ತನಗೆ ಡಿಕ್ಕಿ ಹೊಡೆದ ವಾಹನ ಚಾಲಕನ ಸ್ಥಿತಿ ನೋಡಿ ಈತ ಕಣ್ಣು ಮುಚ್ಚಿಕೊಂಡಿದ್ದಾನೆ. ವಿಷಯ ಏನೆಂದರೆ, ಇಬ್ಬರು ಯುವಕರು ಎಣ್ಣೆ ಮತ್ತಿನಲ್ಲಿ ತಾವು ಚಲಾಯಿಸುತ್ತಿದ್ದ ಎಸ್‌ಯುವಿಯನ್ನು ಕ್ಯಾಬ್‌ಗೆ ಡಿಕ್ಕಿ ಹೊಡೆದ್ದಿದ್ದರು.

ಕ್ಯಾಬ್ ಚಾಲಕ ಆಕ್ರೋಶದಿಂದ, ಯಾಕಪ್ಪಾ ಹೀಗೆ ಮಾಡಿದ್ದೀಯಾ ಎಂದು ಕೇಳಲು ಬಂದವನೇ ಕಣ್ಣು ಮುಚ್ಚಿಕೊಂಡಿದ್ದಾನೆ. ಕಾರಣ, ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದರಂತೆ.
 

Follow Us:
Download App:
  • android
  • ios