'ಜೊತೆ ಜೊತೆಯಲ್ಲಿ..' ಧಾರವಾಹಿ ಮೂಲಕ ಎಲ್ಲರ ಮನ ಗೆದ್ದ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆಶಿಕಾ ಚಂದ್ರಪ್ಪಗೆ ನಂತರ ಕೆರಿಯರ್ ಬ್ರೇಕ್ ಕೊಟ್ಟಿದ್ದು ಸೀರಿಯಲ್ 'ನೀಲಿ'.

ಬಿಗ್ ಬಾಸ್ ಸೀಸನ್ - 5ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡ ಆಶಿಕಾ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ‘ರಾಧಾ ರಮಣ’ ಧಾರಾವಾಹಿಯಲ್ಲಿ ಅವನಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

 

ಇದೀಗ ಮಾತೃ ವಿಯೋಗದಿಂದ ಆಶಿಕಾ ಬಳಲುತ್ತಿದ್ದಾರೆ. ಅಮ್ಮನನ್ನು ಕಳೆದುಕೊಂಡು ನೋವಿನಿಂದ ಹೊರ ಬರಲು ಕಷ್ಟ ಪಡುತ್ತಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಅಮ್ಮ, ನೀನು ನಮ್ಮನು ಬಿಟ್ಟು 13 ದಿನಗಳಾಯಿತು. ದಿನೆ ದಿನೇ ಜೀವನ ಕಷ್ಟ ಎನಿಸುತ್ತಿದೆ. ದಿನಾಲೂ ನಮ್ಮನ್ನು ನೋಡಿ ಕೂಗುತ್ತಿದ್ದದ್ದು, ಅಳುತ್ತಿದ್ದದ್ದು, ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿದ್ದೆ ಇಲ್ಲದೆ ರಾತ್ರಿ ಕಳೆಯಬೇಕಾಗಿದೆ. ನಿನ್ನ ಮಡಿಲಿನಲ್ಲಿ ಬಿಕ್ಕಿ ಬಿಕ್ಕಿ ಅಳಬೇಕೆಂದೆನಿಸುತ್ತಿದೆ. ಐ ಲವ್ ಯೂ. ಮಿಸ್ ಯೂ ಸೊ ಮಚ್’ಎಂದು ಬರೆದು, ಪೋಸ್ಟ್ ಮಾಡಿದ್ದಾರೆ.