ಪ್ರತಿ ವರ್ಷ ತಮ್ಮ ಮನೆಯಲ್ಲಿ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಟ ಸಲ್ಮಾನ್ ಖಾನ್ ಈ ವರ್ಷ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಹಾಗೆಂದು ಹಬ್ಬ ಆಚರಣೆ ಬಿಟ್ಟಿಲ್ಲ.

ಮುಂಬೈ(ಆ.23): ಪ್ರತಿ ವರ್ಷ ತಮ್ಮ ಮನೆಯಲ್ಲಿ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಟ ಸಲ್ಮಾನ್ ಖಾನ್ ಈ ವರ್ಷ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಹಾಗೆಂದು ಹಬ್ಬ ಆಚರಣೆ ಬಿಟ್ಟಿಲ್ಲ.

ಈ ವರ್ಷ ಮುಂಬೈನಲ್ಲೇ ಇರುವ ತಮ್ಮ ಸೋದರಿ ಅರ್ಪಿತಾರ ಮನೆಯಲ್ಲಿ ಸಲ್ಮಾನ್‌'ರ ಕುಟುಂಬ ಗಣೇಶ ಹಬ್ಬವನ್ನು ಆಚರಿಸಲಿದೆಯಂತೆ. ಕಳೆದ 15 ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬಂದಿದ್ದ ಖಾನ್ ಕುಟುಂಬ ಇದೇ ಮೊದಲ ಬಾರಿಗೆ ತಮ್ಮ ಅಧಿಕೃತ ನಿವಾಸವಾದ ಬಾಂದ್ರಾದ ಗೆಲಾಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಹಬ್ಬ ಆಚರಿಸದಿರಲು ನಿರ್ಧಸಿದೆ.

ಅರ್ಪಿತಾ ಆಯುಷ್ ಶರ್ಮಾರನ್ನು ವಿವಾಹವಾಗಿದ್ದಾರೆ.