Asianet Suvarna News Asianet Suvarna News

ಆ್ಯಮಿ, ನೀ ಯಾಕೆ ಹಿಂಗಮ್ಮಿ?

‘ದಿ ವಿಲನ್’ ನಿರ್ದೇಶಕ ಪ್ರೇಮ್ ಹಾಗೂ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ನಡುವೆ ಕೋಲ್ಡ್ ವಾರ್ ಶುರುವಾಗಿದೆ.  ಅಷ್ಟಕ್ಕೂ ಪ್ರೇಮ್‌ಗೆ ಆ್ಯಮಿ ಮೇಲೆ ಕೋಪ ಯಾಕೆ? 

The Villain director Prem anger on Amy Jackson
Author
Bengaluru, First Published Oct 8, 2018, 1:30 PM IST
  • Facebook
  • Twitter
  • Whatsapp

ಬೆಂಗಳೂರು (ಅ. 08): ‘ದಿ ವಿಲನ್’ ನಿರ್ದೇಶಕ ಪ್ರೇಮ್ ಹಾಗೂ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಚಿತ್ರದ ಪ್ರಮೋಷನ್‌ಗೆ ಆ್ಯಮಿ ಬರುತ್ತಿಲ್ಲ ಅಂತ ಪ್ರೇಮ್ ಗರಂ ಆಗಿದ್ದಾರೆ.

ಆ್ಯಮಿ ದುಬೈನಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದು ಬಿಟ್ಟರೆ, ಉಳಿದೆಲ್ಲ ಕಾರ್ಯಕ್ರಮಕ್ಕೂ ಗೈರು. ಕಳೆದ ವಾರ ಆಯೋಜಿಸಿದ್ದ ಟೀಸರ್ ಲಾಂಚ್ ಹಾಗೂ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಗೂ ಆ್ಯಮಿ ತಪ್ಪಿಸಿಕೊಂಡರು. ಆದ್ರೆ, ಅವತ್ತು ಆ್ಯಮಿ ಬಂದೇ ಬರುತ್ತಾರೆ ಎನ್ನುವ ವಿಶ್ವಾಸದಲ್ಲೇ ಇದ್ದರು ಪ್ರೇಮ್. ಹಾಗಂತ ಅವರಿಗೆ ಆ್ಯಮಿ ಆಶ್ವಾಸನೆ ಕೊಟ್ಟಿದ್ದರಂತೆ. ಕೊನೆಗೂ ಸುದ್ದಿಗೋಷ್ಠಿ ಶುರುವಾಗುವ ಸಮಯ ಮೀರುವ ಹೊತ್ತಿಗೆ ಪ್ರೇಮ್ ಮುಖ ಕೆಂಪಾಯಿತು.

‘ಆಯಮ್ಮ ಬರ್ತೇನೆ ಅಂತ ಹೇಳಿತ್ತು, ಈಗ ನೋಡಿದ್ರೆ ಕೈ ಕೊಡ್ತು ಅಂತ ಕಾಣುತ್ತೆ, ಏನಾಯ್ತೋ ಗೊತ್ತಿಲ್ಲ. ಯಾಕೆ ಹಾಗೆ ಮಾಡುತ್ತೋ ಗೊತ್ತಿಲ್ಲ’ ಅಂತ ಪತ್ರಕರ್ತರ ಹತ್ತಿರ ಹೇಳಿಕೊಂಡಿದ್ದರು. ಆ ಕೋಪ ಈಗ ಸ್ಫೋಟಗೊಂಡಿದೆ. ಶೂಟಿಂಗ್ ಸಮಯದಲ್ಲೇ ಆ ಯಮ್ಮ ಲಂಡನ್‌ಗೆ ಹಾರಿದರೆ ಮತ್ತೆ ಇಲ್ಲಿಗೆ ಬರೋದಕ್ಕೆ ವೀಸಾ ಪ್ರಾಬ್ಲಮ್, ಪೀಸಾ ಪ್ರಾಬ್ಲಮ್ ಅಂತೆಲ್ಲ ಕಾಟ ಕೊಡುತ್ತೆ ಅಂತಿದ್ದ ಪ್ರೇಮ್‌ಗೆ ಈಗ ಪ್ರಮೋಷನ್ ವಿಚಾರದಲ್ಲಿ ಆ್ಯಮಿ ಕಾಟ ಶುರುವಾಗಿದೆ. ಚಿತ್ರದ ರಿಲೀಸ್ ಆಗುವ ಹೊತ್ತಿಗೆ ಇದು ಎಲ್ಲಿಗೆ ಹೋಗಿ ನಿಲ್ಲತ್ತೋ ಗೊತ್ತಿಲ್ಲ.

Follow Us:
Download App:
  • android
  • ios