ಬೆಂಗಳೂರು(ನ.25): ಸದ್ಯ ಸ್ಯಾಂಡಲ್ವುಡ್ ನಲ್ಲಿ ಯಶ್-ರಾಧಿಕಾ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗೆ ಕೆಲವೇ ದಿನಗಳು ಉಳಿದ್ದು, ಇಡೀ ಚಿತ್ರರಂಗವೇ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸದ್ಯ ಅಂತಿಮ ಕ್ಷಣದ ತಯಾರಿಯಲ್ಲಿರುವ ಈ ತಾರಾ ಜೋಡಿ ತಮ್ಮ ಪ್ರೀತಿಯ ಕುರಿತು ಇರುವ ಕುತೂಹಲಕ್ಕೆ ವಿಡಿಯೋ ಮೂಲಕ ಉತ್ತರ ನೀಡಿದ್ದಾರೆ. 

ತಮ್ಮ ಮದುವೆಗೆ ಸಂಬಂಧಿಸಿದ ಮಾಹಿತಿಯು ಸಾಮಾನ್ಯ ಜನರಿಗೂ ತಲುಪ ಬೇಕು ಎನ್ನುವ ಉದ್ದೇಶದಿಂದ ಅಫೀಷಿಯಲ್ ಫೇಸ್'ಬುಕ್ ಪೇಜ್, ಯೂಟೂಬ್ ಚಾನಲ್ ಆರಂಭಿಸಿರುವ ಈ ಜೋಡಿ, ತಮ್ಮ ಪ್ರೀತಿಯ ಕುರಿತ ವಿಡಿಯೋವೊಂದನ್ನು ಅಭಿಮಾನಿಗಳಿಗಾಗಿಯೇ ಬಿಡುಗಡೆ ಮಾಡಿದ್ದಾರೆ.