Asianet Suvarna News Asianet Suvarna News

ಅರೆ ಏನಿದು ಅಜಯ್ ರಾವ್ ಲವ್ ಆಶಿಕಾ ?

ಕಳೆದ ವರ್ಷ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಚೆಲುವೆ ಈ ಆಶಿಕಾ ರಂಗನಾಥ್. ಅನಂತರ ‘ಮಗುಳುನಗೆ’, ‘ರಾಜು ಕನ್ನಡ ಮೀಡಿಯಂ’ ಜತೆಗೆ ಶರಣ್ ಅಭಿನಯದ ರಾಂಬೊ 2’ ಚಿತ್ರಗಳಿಗೆ ನಾಯಕಿ ಆದರು. ಈ ಪೈಕಿ ‘ಮುಗುಳುನಗೆ’ ಬಿಡುಗಡೆಯಾಗಿ ಆಶಿಕಾ ಅಭಿನಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

Tayige takka maga Movie Heroine Ashika

ನಿರ್ದೇಶಕ ಶಶಾಂಕ್ ಚಿತ್ರಕ್ಕೆ ಕೊನೆಗೂ ಹುಡುಗಿ ಸಿಕ್ಕಳು. ‘ತಾಯಿಗೆ ತಕ್ಕ ಮಗ’ನಿಗಾಗಿ ಸತತ ಮೂರು ತಿಂಗಳ ಕಾಲ ಅವರು ನಡೆಸಿದ ವಧು ಹುಡುಕಾಟ ಕೊನೆಗೂ ಫಲಿಸಿದೆ. ‘ಮುಗುಳುನಗೆ’ ಚೆಲುವೆ ಆಶಿಕಾ ರಂಗನಾಥ್, ಶಶಾಂಕ್ ಸಿನಿಮಾಸ್ ನಿರ್ಮಾಣದ ‘ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ನಾಯಕಿ ಆಯ್ಕೆಗಾಗಿ ನಡೆದ ಆಡಿಷನ್ಸ್‌ಗೆ ಬಂದಿದ್ದ ಒಟ್ಟು 150 ಬೆಡಗಿಯರ ಪೈಕಿ ಅದೃಷ್ಟ ಆಶಿಕಾ ಪಾಲಾಗಿದೆ. ಈಗಷ್ಟೇ ಶರಣ್ ಅಭಿನಯದ ರಾಂಬೊ 2’ ಚಿತ್ರೀಕರಣ ಮುಗಿಸಿರುವ ಆಶಿಕಾ, ಈಗ ‘ತಾಯಿಗೆ ತಕ್ಕ ಮಗ’ನಿಗಾಗಿ ಅಜಯ್ ರಾವ್ ಜತೆಗೆ ಡ್ಯುಯೆಟ್ ಹಾಡುವುದು ಬಾಕಿಯಿದೆ. ಕಳೆದ ವರ್ಷ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಚೆಲುವೆ

ಈ ಆಶಿಕಾ ರಂಗನಾಥ್. ಅನಂತರ ‘ಮಗುಳುನಗೆ’, ‘ರಾಜು ಕನ್ನಡ ಮೀಡಿಯಂ’ ಜತೆಗೆ ಶರಣ್ ಅಭಿನಯದ ರಾಂಬೊ 2’ ಚಿತ್ರಗಳಿಗೆ ನಾಯಕಿ ಆದರು. ಈ ಪೈಕಿ ‘ಮುಗುಳುನಗೆ’ ಬಿಡುಗಡೆಯಾಗಿ ಆಶಿಕಾ ಅಭಿನಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆಶಿಕಾ ಸ್ಪೀಕಿಂಗ್ ‘ನನ್ನ ಮೊದಲ ಚಿತ್ರ ‘ಕ್ರೇಜಿ ಬಾಯ್’ ಕಾರ್ಯಕ್ರಮದಲ್ಲಿ ನಿರ್ದೇಶಕ ಶಶಾಂಕ್ ಸರ್ ಪರಿಚಯವಾಗಿದ್ದರು. ಆಗ ಅವರು ಮಾತಾನಾಡುತ್ತಾ, ನಮ್ಗೂ ಡೇಟ್ಸ್ ಕೊಡಿ ಅಂತ ಹೇಳಿದ್ದರು. ಅದು ತಮಾಷೆ ಅಂತ ಅನ್ಕೊಂಡಿದ್ದೆ.

ಆನಂತರ ಮತ್ತೊಮ್ಮೆ ಸಿಕ್ಕಾಗ ವಿವರ ಕೇಳಿದರು. ಆಗಲೂ ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಆದ್ರೆ ‘ತಾಯಿಗೆ ತಕ್ಕ ಮಗ ’ಚಿತ್ರಕ್ಕೆ ಆಡಿಷನ್ಸ್ ನಡೆಯುತ್ತಿದೆ ಅಂತ ಅವರೇ ಒಮ್ಮೆ ಹೇಳಿದಾಗ ನನ್ನ ಪ್ರೊಫೈಲ್ ಕೊಟ್ಟಿದ್ದೆ. ಅದರ ಮೂಲಕ ಅವರು ತಮ್ಮ ನಿರ್ಮಾಣದ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ತುಂಬಾ ಖುಷಿ ಆಗಿದೆ. ಅಜಯ್ ರಾವ್ ಜತೆಗೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಇದು ಅದೃಷ್ಟವೇ ಅಂತ ಭಾವಿಸಿದ್ದೇನೆ’ ಎನ್ನುತ್ತಾರೆ ಆಶಿಕಾ. ಆಶಿಕಾಗೆ ಇಲ್ಲಿ ಸಿಂಪಲ್ ಹುಡುಗಿ ಪಾತ್ರ. ‘ಕಥಾ ನಾಯಕ ರೆಬೆಲ್. ಆತನ ಎದುರು ಸೌಮ್ಯ ಸ್ವಭಾವದ ಹುಡುಗಿ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ.

ಸಿನಿಮಾದ ಉದ್ದಕ್ಕೂ ಕಾಣಿಸಿಕೊಳ್ಳುವ ಅವಕಾಶ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಸುಮಲತಾ ಅಂಬರೀಷ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಜತೆಗೆ ತೆರೆ ಮೇಲೆ ಕಾಣಿಸಿಕೊಳ್ಳುವ ಅವಕಾಶ. ಅವರಿಂದ ಸಾಕಷ್ಟು ಕಲಿತುಕೊಳ್ಳಬಹುದು ಅನ್ನೋದು ಖುಷಿ’ ಎಂದರು ನಟಿ ಆಶಿಕಾ. ಅಂದಹಾಗೆ, ‘ತಾಯಿಗೆ ತಕ್ಕ ಮಗ’ ಚಿತ್ರವನ್ನು ಶಶಾಂಕ್ ಸಿನಿಮಾಸ್ ಬ್ಯಾನರ್‌ನಲ್ಲಿ ವೇದ್ ಗುರು ನಿರ್ದೇಶಿಸುತ್ತಿದ್ದು, ತಾಯಿ ಪಾತ್ರದಲ್ಲಿ ಹಿರಿಯ ನಟಿ ಸುಮಲತಾ ಅಂಬರೀಶ್ ಅಭಿನಯಿಸುತ್ತಿದ್ದಾರೆ.

(ಕನ್ನಡಪ್ರಭ)

Follow Us:
Download App:
  • android
  • ios