ಮುಂಬೈ(ಜೂ.30): ಬಾಲಿವುಡ್ ಚಿತ್ರನಟಿಯರು ಒಬ್ಬೊಬ್ಬರಾಗಿ ಕಾಸ್ಟಿಂಗ್ ಕೌಚ್ ಕುರಿತು ತಮ್ಮ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ನಿನ್ನೆಯಷ್ಟೇ ಬಾಲಿವುಡ್ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಕಾಸ್ಟಿಂಗ್ ಕೌಚ್ ಕುರಿತು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದರು.

ಇದೀಗ ಕಾಸ್ಟಿಂಗ್ ಕೌಚ್ ಕುರಿತು ಮಾತನಾಡುವ ಸರದಿ ಮತ್ತೋರ್ವ ನಟಿ ಸ್ವರಾ ಭಾಸ್ಕರ್ ಅವರದ್ದು. ಹೌದು, ಸ್ವರಾ ಭಾಸ್ಕರ್ ಅವರಿಗೂ ಕಾಸ್ಟಿಂಗ್ ಕೌಚ್ ಕರಾಳ ಅನುಭವ ಆಗಿದೆಯಂತೆ.

ಚಿತ್ರವೊಂದರ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ, ಪ್ರಸಿದ್ದ ಚಿತ್ರ ನಿರ್ಮಾಪಕರ ಮ್ಯಾನೇಜರ್ ವೋರ್ವ ತಮ್ಮ ಕಿವಿಗೆ ಮುತ್ತು ಕೊಡಲು ಪ್ರಯತ್ನಿಸಿದ್ದ ಎಂದು ಸ್ವರಾ ಭಾಸ್ಕರ್ ಹೇಳಿದ್ದಾರೆ. ಸಿನಿಮಾ ಕುರಿತ ಚರ್ಚೆಗಾಗಿ ಆತನ ಮನೆಗೆ ಹೋಗಿದ್ದಾಗ, ಮ್ಯಾನೇಜರ್ ತಮ್ಮ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದ ಎಂದಿರುವ ಅವರು, ಅಪಾಯದ ಮುನ್ಸೂಚನೆ ಅರಿತು ಕೂಡಲೇ ತಾವು ಅಲ್ಲಿಂದ ಕಾಲ್ಕಿತ್ತಿದ್ದಾಗಿ ಹೇಳಿದ್ದಾರೆ.

ಏಕಾಏಕಿ ಹೊರಡಲು ನಿಂತ ತಮ್ಮನ್ನು ತಡೆದ ಮ್ಯಾನೇಜರ್ ತಮ್ಮ ಕಿವಿಗೆ ಮುತ್ತಿಕ್ಕಲು ಪ್ರಯತ್ನಿಸಿದ್ದ, ಅಲ್ಲದೇ ತಮಗೆ ಐ ಲವ್ ಯೂ ಎಂದು ಹೇಳಿ ನಗುತ್ತಲಿದ್ದ ಎಂದು ಸ್ವರಾ ಹೇಳಿದ್ದಾರೆ. ಇಂತಹ ಪರಿಸ್ಥಿತಿಗಳನ್ನು ನಟಿಯರು ಪ್ರಾರಂಬದಲ್ಲಿ ಎದುರಿಸಬೇಕಾಗಿ ಬರುವುದು ವಿಪರ್ಯಾಸ ಎಂದು ಸ್ವರಾ ಭಾಸ್ಕರ್ ಸಂದರ್ಶನದಲ್ಲಿ ಬಿಪ್ರಾಯಪಟ್ಟಿದ್ದಾರೆ.