ತನ್ನೊಳಗಿನ ’ಆಕೆ’ಯನ್ನು ನೆನೆದು ಕಣ್ಣೀರಾದ ಸನ್ನಿ..!

Sunny Leone Writes Emotional Note To Her Former Self
Highlights

ಮಾಜಿ ನೀಲಿ ತಾರೆ ಸನ್ನಿ ಲಿಯೋನೆ ಕೇವಲ ತನ್ನ ಮೈಮಾಟದಿಂದ ಅಷ್ಟೇ ಅಲ್ಲ ಮನಸ್ಸನ್ನೂ ಬಿಚ್ಚಿ ಭಾವನೆಗಳಿಗೆ ರೂಪ ಕೊಡಬಲ್ಲ ನಟಿ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಸನ್ನಿ ತನ್ನ ಮನಸ್ಸಿನಲ್ಲಿರುವ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ನಮ್ಮ ಕಣ್ಣಲ್ಲಿ ನೀರು ತರಿಸಬಲ್ಲಳು ಎಂಬುದು ಇದೀಗ ಸಾಬೀತಾಗಿದೆ.

ಮುಂಬೈ(ಮೇ.25): ಮಾಜಿ ನೀಲಿ ತಾರೆ ಸನ್ನಿ ಲಿಯೋನೆ ಕೇವಲ ಮೈ ಮಾಟದಿಂದ ಅಷ್ಟೇ ಅಲ್ಲ ಮನಸ್ಸನ್ನೂ ಬಿಚ್ಚಿ ಭಾವನೆಗಳಿಗೆ ರೂಪ ಕೊಡಬಲ್ಲ ನಟಿ ಎಂಬುದು ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಸನ್ನಿ ತನ್ನ ಮನಸ್ಸಿನಲ್ಲಿರುವ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ನಮ್ಮ ಕಣ್ಣಲ್ಲಿ ನೀರು ತರಿಸಬಲ್ಲಳು ಎಂಬುದು ಇದೀಗ ಸಾಬೀತಾಗಿದೆ.

ಅದ್ಯಾರಿಗಪ್ಪ ಸನ್ನಿ ಮೇಡಂ ಪತ್ರ ಬರೆದಿದ್ದು ಅಂತೀರಾ?. ಬೇರೆ ಯಾರಿಗೂ ಅಲ್ಲ ತನಗೆ ತಾನೇ ಭಾವನಾತ್ಮಕ ಪತ್ರವೊಂದನ್ನು ಬರೆದುಕೊಂಡಿರುವ ಸನ್ನಿ ತನ್ನೊಳಗಿನ ಕರೆನಜೀತ್ ಕೌರ್ ವೋಹ್ರಾ[ಸನ್ನಿ ಲಿಯೋನೆ ಅವರ ಜನ್ಮ ನಾಮ]ಳನ್ನು ನೆನೆಪಿಸಿಕೊಂಡಿದ್ದಾರೆ. ಅಸಲಿಗೆ ಸನ್ನಿ ಜೀವನ ಆಧಾರಿತ ವೆಬ್ ಸಿರೀಸ್ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸನ್ನಿ ತಮ್ಮೊಳಗಿನ ಕರೆನಜೀತ್ ಳನ್ನು ನೆನೆದು ಕಣ್ಣೀರು ಹಾಕಿದ್ದಾರೆ.

 

ಜೀವನದ ಪುಟಗಳನ್ನು ಹಿಂದಕ್ಕೆ ತಿರುವಿ ಹಾಕಿದಾಗ ಅದೆಷ್ಟೋ ಘಟನೆಗಳು ನೆನಪಿಗೆ ಬರುತ್ತವೆ. ಕಿರೆನಜೀತ್ ಆಗಿ ಕಳೆದ ಬಾಲ್ಯದ ದಿನಗಳು ಅತ್ಯಂತ ಸಂತೋಷದ ದಿನಗಳು ಎಂದು ಸನ್ನಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳನ್ನೂ ನೆನೆದು ಸನ್ನಿ ಭಾವುಕರಾಗಿದ್ದಾರೆ. ಈ ಪತ್ರ ಬರೆಯುತ್ತಿರುವ ಸಂದರ್ಭದಲ್ಲಿ ನಾನು ಅದೆಷ್ಟು ಬಾರಿ ಅತ್ತಿದ್ದೇನೋ ಗೊತ್ತಿಲ್ಲ ಎಂದೂ ಸನ್ನಿ ಹೇಳಿದ್ದಾರೆ.

loader