ಮುಂಬೈ[ಆ. 02]  ಮಾದಕ ನಟಿ ಸನ್ನಿಲಿಯೋನ್​ ನಟಿಸಿರುವ ಅರ್ಜುನ್​ ಪಟಿಯಾಲ ಸಿನಿಮಾ ವಾರದ ಹಿಂದೆ ರಿಲೀಸ್​ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಸನ್ನಿಲಿಯೋನ್​ ಬಳಸಿರುವ ಫೋನ್​ ನಂಬರ್ ವಿಚಾರ ದೊಡ್ಡ ಸುದ್ದಿ ಮಾಡಿತ್ತು.

ಚಿತ್ರದಲ್ಲಿ ಹೇಳಿರುವ ಪೋನ್ ನಂಬರ್ ಸನ್ನಿದೇ ಎಂದು ಭಾವಿಸಿ ಅನೇಕರು ಕರೆಮಾಡಿದ್ದರು. ಆದರೆ ಆ ಕರೆ ದೆಹಲಿಯ ವ್ಯಕ್ತಿಯೊಬ್ಬರಿಗೆ ಹೋಗುತ್ತಿತ್ತು. ಆಕಸ್ಮಿಕವಾಗಿ ದೆಹಲಿಯ ಪಿತಂಪುರಿ ನಿವಾಸಿ ಪುನೀತ್​ ಅಗರ್​ವಾಲ್​ ಅವರ ನಂಬರ್​ ಆಗಿತ್ತು. ಚಿತ್ರ ವೀಕ್ಷಿಸಿದ ಕೆಲ ಪಡ್ಡೆಹೈಕ್ಲು ಪುನೀತ್​ ಅಗರ್​ವಾಲ್​ ಅವರ ನಂಬರ್​ಗೆ ಫೋನ್​ ಮಾಡಿ, ನಾವು ಸನ್ನಿಲಿಯೋನ್ ಜೊತೆ ಮಾತನಾಡಬೇಕೆಂದು ಕಾಟ ಕೊಡುತ್ತಿದ್ದು ಸುದ್ದಿಯಾಗಿತ್ತು.

ವಿವಾದದ ಬಳಿಕ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ಕಂಗನಾ!

ಈ ಸುದ್ದಿ ಇದೀಗ ಈ ಸುದ್ದಿ ಸನ್ನಿ ಅವರ ಕಿವಿಗೂ ಬಿದ್ದಿದೆ. ಆದರೆ  ಸನ್ನಿ ಲಿಯೋನ್ ಕಾಲ್ ಸ್ವೀಕರಿಸುತ್ತಿದ್ದ ವ್ಯಕ್ತಿಗೆ ಸಾರಿ ಕೇಳಿದ್ದಾರೆ. ಜತೆಗೆ ನಿಮಗೆ ವಿಶೇಷ ವ್ಯಕ್ತಿಗಳಿಂದಲೂ ಕರೆ  ಬಂದಿರಬಹುದಲ್ಲವೇ ಎಂದು ನಯವಾಗಿ ಕಾಲೆಳೆದಿದ್ದಾರೆ.