ಸೆಲೆಬ್ರಿಟಿ ಫೋಟೋಗ್ರಾಫರ್ ದಾದೂ ರಥ್ನಾನಿ 2019ರ ಕ್ಯಾಲೆಂಡರ್ ಲಾಂಚ್ ಮಾಡಿದ್ದಾರೆ. ಈ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್‌ಗಳಾದ ಕಿಯಾರಾ ಅಡ್ವಾನಿ, ಟೈಗರ್ ಶ್ರಾಫ್, ಫರಾನ್ ಅಖ್ತರ್ ಹಾಗೂ ಸನ್ನಿ ಭಾಗಿಯಾಗಿದ್ದರು.

ಕಾರ್ಯಕ್ರಮಕ್ಕೆ ಬಂದಿದ್ದ ಸನ್ನಿ ವೈಟ್ ಶರ್ಟ್ ಹಾಗೂ ಸಿಲ್ವರ್ ಸ್ಕರ್ಟ್ ಧರಿಸಿ ಹಾಟ್‌ಲುಕ್‌ನಲ್ಲಿ, ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ನೋಡುವಂತೆ ಕಾಣುತ್ತಿದ್ದರು. ಇದಕ್ಕಿಂತಲೂ ಕ್ಯಾಲೆಂಡರ್‌ನಲ್ಲಿ ಸನ್ನಿಯ ಫೋಟೋವೊಂದು ಇದ್ದು, ಎಲ್ಲರ ನಿದ್ದೆಗೆಡುವಂತೆ ಮಾಡಿದೆ.

ಸನ್ನಿ ಬ್ಯಾಗ್‌ ಸೀಕ್ರೇಟ್ ಬಹಿರಂಗ! ಅಷ್ಟಕ್ಕೂ ಅದರಲ್ಲಿ ಏನಿರುತ್ತೆ?

ಬಿಡುಗಡೆಯಾದ ಕ್ಯಾಲೆಂಡರ್‌ನಲ್ಲಿರುವ ಫೋಟೋವೊಂದನ್ನು ಸನ್ನಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ‘ಇಯರ್ ಇಟ್ ಈಸ್, ಲವ್ ಮೈ ಶೂಟ್ ಇನ್ 2019 #DabbooRatnaniCalendar’ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಮೇಕಪ್ ಮಾಡಿರುವುದು ಥಾಮಸ್ ಹಾಗು ವಸ್ತ್ರ ವಿನ್ಯಾಸ ಮಾಡಿರುವುದು ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾವಂತೆ.

 

ಮಲಯಾಳಂ ಚಿತ್ರದಲ್ಲಿ ಮೆಗಾಸ್ಟಾರ್ ಮುಮ್ಮಟಿಯೊಂದಿಗೆ ಸನ್ನಿ ಅಭಿನಯಿಸುತ್ತಿದ್ದು, ‘ಮಧುರ ರಾಜ’ ಎಂಬ ಹೆಸರಿನ ಈ ಚಿತ್ರದ ಶೂಟಿಂಗ್‌ನಲ್ಲಿ ಈ ಬಾಲಿವುಡ್ ಬೆಡಗಿ ಈಗ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ.