ಸುಕೃತಾ ವಾಗ್ಲೆ ಹೇಗಾಗಿದ್ದಾರೆ ಗೊತ್ತಾ? ನೋಡಿದರೆ ಹುಬ್ಬೇರಿಸುವುದು ಗ್ಯಾರಂಟಿ!

Sukrutha Wagle upcoming movie Megha alias Myagi trailer released
Highlights

ಮೇಘ ಅಲಿಯಾಸ್  ಚಿತ್ರದಲ್ಲಿ ಸುಕೃತಾ ವಾಗ್ಲೆ ಅವರದ್ದು  ಪಕ್ಕಾ ಟಾಮ್ ಬಾಯ್ ಲುಕ್. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ್ದಲ್ಲಿದ್ದಂತೆ ಇಲ್ಲೂ ಕೂಡ ಅವರು ಗಂಡುಬೀರಿ. ಜತೆಗೆ ಅವರ ಪಾತ್ರಕ್ಕಿದದ್ದು ವಿಲನ್ ಶೇಡ್. ಕನ್ನಡದ ನಟಿಯರು ಬಹುತೇಕ  ಹೋಮ್ಲಿ, ಬಬ್ಲಿ ಹಾಗೂ ಗ್ಲಾಮರಸ್ ಪಾತ್ರಗಳು ಎನ್ನುತ್ತಿರುವಾಗ ಸುಕೃತಾ ತಾನು ಪಕ್ಕಾ ಮಾಸ್ ಆ್ಯಂಡ್ ಟಾಮ್ ಬಾಯ್ ಎನ್ನುತ್ತಾರೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ. 

ನಟಿ ಸುಕೃತಾ ವಾಗ್ಳೆ ಎಲ್ಲಿದ್ದಾರೆ ಎನ್ನುತ್ತಿದೆ ಗಾಂಧಿನಗರ. ಆದ್ರೆ ಅವರು ಅಭಿನಯಿಸಿರುವ ‘ಮೇಘ ಅಲಿಯಾಸ್ ಮ್ಯಾಗಿ’ ಚಿತ್ರ ಸಖತ್ ಸುದ್ದಿ ಮಾಡುತ್ತಿದೆ.  ಹಿಂದೊಮ್ಮೆ ಚಿತ್ರದ ಟ್ರೇಲರ್‌ನಲ್ಲಿ ಹೊರಬಿದ್ದ ‘ಸ್ಮೋಕ್ ಕಿಸ್’ ಸಖತ್ ಸದ್ದು ಮಾಡಿತ್ತು. ಈಗ ಅವರ ಬೋಲ್ಡ್ ಲುಕ್‌ನ ಫೋಟೋಗಳು ಗಾಂಧಿನಗರ ಹುಬ್ಬೇರಿಸುವಂತೆ ಮಾಡಿವೆ.

ಈ ಚಿತ್ರದಲ್ಲಿ ಅವರದ್ದು ಪಕ್ಕಾ ಟಾಮ್ ಬಾಯ್ ಲುಕ್. ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ್ದಲ್ಲಿದ್ದಂತೆ ಇಲ್ಲೂ ಕೂಡ ಅವರು ಗಂಡುಬೀರಿ. ಜತೆಗೆ ಅವರ ಪಾತ್ರಕ್ಕಿದದ್ದು ವಿಲನ್ ಶೇಡ್. ಕನ್ನಡದ ನಟಿಯರು ಬಹುತೇಕ  ಹೋಮ್ಲಿ, ಬಬ್ಲಿ ಹಾಗೂ ಗ್ಲಾಮರಸ್ ಪಾತ್ರಗಳು ಎನ್ನುತ್ತಿರುವಾಗ ಸುಕೃತಾ ತಾನು ಪಕ್ಕಾ ಮಾಸ್ ಆ್ಯಂಡ್ ಟಾಮ್ ಬಾಯ್ ಎನ್ನುತ್ತಾರೆ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.

‘ಇದೊಂದು ರೀತಿ ಪಕ್ಕಾ ಮಾಸ್ ಕ್ಯಾರೆಕ್ಟರ್. ಈ ಹಿಂದೆ ಮಂಜುಳಾ, ಮಾಲಾಶ್ರೀ ಅವರು ಅಭಿನಯಿಸಿದ್ದ ಗಂಡುಬೀರಿ ಪಾತ್ರಗಳ ಹಾಗೆ. ಅಲ್ಲಿ ಆ ಪಾತ್ರಕ್ಕಿರುವ ಲುಕೇ ವಿಭಿನ್ನ. ಇಂಥದೊಂದು ಪಾತ್ರದಲ್ಲಿ ಅಭಿನಯಿಸುವ ಅವಕಾಶ ಬಂದಾಗ ಹೇಗೋ ಏನೋ ಎನ್ನುವ ಭಯ ಇತ್ತು.ಆದರೆ, ಚಿತ್ರ ತಂಡದ ಸಹಕಾರದೊಂದಿಗೆ ಆ ಪಾತ್ರಕ್ಕೆ ನ್ಯಾಯ ಒದಗಿಸುವ ಖುಷಿ ನನಗಿದೆ’ ಎನ್ನುತ್ತಾರೆ ನಟಿ ಸುಕೃತಾ ವಾಗ್ಳೆ. ಈ ಚಿತ್ರ ಜೂನ್ 15 ಕ್ಕೆ ತೆರೆಗೆ ಬರುತ್ತಿದೆ. 

loader