ಪ್ರೀತಿಯಲ್ಲಿ ಸೋತ ಅಭಿಮಾನಿಗೆ ಪ್ರೇಮ ಪಾಠ ಮಾಡಿದ ಸುದೀಪ್

Sudeep advice love tips to his fan
Highlights

ನಮಗಿರುವುದು ಒಂದೇ ಬದುಕು. ಒಂದೇ ಚಾನ್ಸು. ಪ್ರೀತಿ ಬಿಟ್ಟುಕೊಡುವುದೇ ಹೊರತು ಹಿಡಿದಿಟ್ಟುಕೊಳ್ಳುವುದಲ್ಲ. ನಿನ್ನ ಅಪ್ಪ, ಅಮ್ಮನಿಗೆ ಒಳ್ಳೆಯವನಾಗಿರು. ನಿನ್ನನ್ನೇ ಪ್ರಪಂಚ ಅಂದುಕೊಂಡಿರುವ ಕೆಲವೇ ಮಂದಿಗೆ ಒಳ್ಳೆಯವನಾಗಿ ಇರು. ಶ್ರೇಷ್ಠ ರೀತಿಯಲ್ಲಿ ಬದುಕು ಗೆಳೆಯಾ. ಜೀವನ ವೇಸ್ಟ್ ಮಾಡಿಕೊಳ್ಳದಿರು- ಹೀಗೆ ಬುದ್ಧಿಮಾತು ಹೇಳಿದ್ದು ಕಿಚ್ಚ ಸುದೀಪ್. 

ಬೆಂಗಳೂರು (ಮೇ.19): ನಮಗಿರುವುದು ಒಂದೇ ಬದುಕು. ಒಂದೇ ಚಾನ್ಸು. ಪ್ರೀತಿ ಬಿಟ್ಟುಕೊಡುವುದೇ ಹೊರತು ಹಿಡಿದಿಟ್ಟುಕೊಳ್ಳುವುದಲ್ಲ. ನಿನ್ನ ಅಪ್ಪ, ಅಮ್ಮನಿಗೆ ಒಳ್ಳೆಯವನಾಗಿರು. ನಿನ್ನನ್ನೇ ಪ್ರಪಂಚ ಅಂದುಕೊಂಡಿರುವ ಕೆಲವೇ ಮಂದಿಗೆ ಒಳ್ಳೆಯವನಾಗಿ ಇರು. ಶ್ರೇಷ್ಠ ರೀತಿಯಲ್ಲಿ ಬದುಕು ಗೆಳೆಯಾ. ಜೀವನ ವೇಸ್ಟ್ ಮಾಡಿಕೊಳ್ಳದಿರು- ಹೀಗೆ ಬುದ್ಧಿಮಾತು ಹೇಳಿದ್ದು ಕಿಚ್ಚ ಸುದೀಪ್. 

ತನ್ನನ್ನು  ಪ್ರೀತಿಸುವ ಜನರ ಟ್ವೀಟ್‌ಗಳಿಗೆ ರಿಪ್ಲೈ ಕೊಡಲು ತನ್ನ ಅಮೂಲ್ಯ ಸಮಯ ನೀಡುವ ಸುದೀಪ್ ಇದೀಗ ಬ್ರೇಕಪ್ ಆದ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಟ್ವೀಟರ್ ಜಗತ್ತಿನ ಮೆಚ್ಚುಗೆ ಗಳಿಸಿದ್ದಾರೆ. ಇದಕ್ಕೂ ಮುನ್ನ ಸುದೀಪ್ ಅಭಿಮಾನಿ ಒಂದು ಪ್ರಶ್ನೆ ಕೇಳಿದ್ದ. ಆ ಪ್ರಶ್ನೆ ಹೀಗಿದೆ:

ಪ್ರೀತಿ ಮಾಡೋಕೆ ಆಸ್ತಿ, ಅಂತಸ್ತು ಅಂದ ಚೆಂದ ಇವೆಲ್ಲಾ ಬೇಕಾ ಬಾಸ್?  ಎಲ್ಲಾ ಬಿಟ್ಟು ಹುಚ್ಚನ ಥರ ಪ್ರೀತ್ಸಿದ್ರೂ ಅರ್ಥಾನೇ ಮಾಡ್ಕೋತಿಲ್ಲ ಬಾಸ್.  ಸ್ನೇಹ ಕಳೆದುಕೊಳ್ಳಬೇಕಾಗುತ್ತೆ ಅಂತ ಸುಮ್ನೆ ನೋವು ಅನುಭವಿಸ್ತಿದೀನಿ. ಏನ್ ಮಾಡ್ಬೇಕು ಅಂತ ತಿಳೀತಿಲ್ಲ ಅಣ್ಣ. ಅವಳ್ ಇಲ್ದೆ ನಂಗೂ ಇರೋಕೆ ಆಗೋಲ್ಲ. - ಹೀಗೆ ಟ್ವೀಟ್ ಮಾಡಿದ ಅಭಿಮಾನಿಯ ಹೆಸರು ಜೀವ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇಂಥಾ ಟ್ವೀಟ್‌ಗಳಿಗೆ ರಿಪ್ಲೈ ಮಾಡೋದು ಅಪರೂಪ. ಆದರೆ ಸುದೀಪ್ ಮಾತ್ರ ಅಭಿಮಾನಿಗೆ ಬುದ್ಧಿ ಹೇಳಿ ತಾನು ಸ್ವಲ್ಪ ಡಿಫರೆಂಟು ಅಂತ ತೋರಿಸಿಕೊಟ್ಟಿದ್ದಾರೆ. ಸುದೀಪ್ ಬುದ್ಧಿಮಾತು ವೈರಲ್ ಆಗಿದೆ.  

 

 

loader