ಇಲ್ಲಿಯವರೆಗೂ ಭಾರತೀಯ ಯಾವಚಿತ್ರವೂ ಬಾಹುಬಲಿ-2 ಮಾಡದ ಸಾಧನೆಯನ್ನು ಮಾಡಿರಲಿಲ್ಲ. ಕೇವಲ ಮೂರ್ನಾಲ್ಕು ದಿನಗಳಲ್ಲಿಯೇ 500 ಕೋಟಿಗೂ ಹೆಚ್ಚು ಹಣವನ್ನು ಈ ಚಿತ್ರ ಬಾಚಿದೆ. ಹಾಲಿವುಡ್' ಚಿತ್ರಗಳನ್ನು ಮೀರಿಸುವ ರೀತಿಯಲ್ಲಿ ತಂತ್ರಜ್ಞಾನವನ್ನು ನಿರ್ದೇಶಕ ತನ್ನ ಕೈಚಳಕದಲ್ಲಿ ತೋರಿಸಿದ್ದಾರೆ.
ಹೈದರಾಬಾದ್(ಮೇ.03): ಬಾಹುಬಲಿ-2 ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ವಿಜೃಂಭಿಸುತ್ತಿರುವ ಜೊತೆಗೆ ದೇಶದ ಯಾವ ಸಿನಿಮಾ ಮಾಡದ ಎಲ್ಲ ದಾಖಲೆಗಳನ್ನು ಪುಡಿಪುಡಿ ಮಾಡಿದೆ.
ಇಲ್ಲಿಯವರೆಗೂ ಭಾರತೀಯ ಯಾವಚಿತ್ರವೂ ಬಾಹುಬಲಿ-2 ಮಾಡದ ಸಾಧನೆಯನ್ನು ಮಾಡಿರಲಿಲ್ಲ. ಕೇವಲ ಮೂರ್ನಾಲ್ಕು ದಿನಗಳಲ್ಲಿಯೇ 500 ಕೋಟಿಗೂ ಹೆಚ್ಚು ಹಣವನ್ನು ಈ ಚಿತ್ರ ಬಾಚಿದೆ. ಹಾಲಿವುಡ್' ಚಿತ್ರಗಳನ್ನು ಮೀರಿಸುವ ರೀತಿಯಲ್ಲಿ ತಂತ್ರಜ್ಞಾನವನ್ನು ನಿರ್ದೇಶಕ ತನ್ನ ಕೈಚಳಕದಲ್ಲಿ ತೋರಿಸಿದ್ದಾರೆ.
ಕೇವಲ ಭಾರತೀಯ ಚಿತ್ರರಂಗ ಮಾತ್ರವಲ್ಲ ವಿಶ್ವಚಿತ್ರರಂಗದ ಗಣ್ಯರು ಬಾಹುಬಲಿಯನ್ನು ಶ್ಲಾಘಿಸಿದ್ದಾರೆ. ನಿರ್ದೇಶಕರು 5 ವರ್ಷಗಳ ಕಾಲ 2 ಬಾಹುಬಲಿಯನ್ನು ನಿರ್ದೇಶಿಸಲು ತಮ್ಮ ಜೀವವನ್ನೇ ಪಣವಿಟ್ಟಿದ್ದರು. ಮೊದಲ ಭಾಗಕ್ಕಿಂತ ಅತ್ಯತ್ಭುತವಾಗಿ ಸಿನಿಮಾ ಮೂಡಿ ಬಂದಿದೆ.
ಈಗ ಎಲ್ಲರ ದೃಷ್ಟಿಯಿರುವುದು ನಿರ್ದೇಶಕ ರಾಜಮೌಳಿಯವರು 2 ಚಿತ್ರಗಳಿಂದ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬುದು. ಮೂಲಗಳು ಹಾಗೂ ಮಾಧ್ಯಮಗಳ ವರದಿಯ ಪ್ರಕಾರ ಸಿನಿಮಾ ಲಾಭದ ಮೂರನೇ ಒಂದು ಭಾಗದಷ್ಟು ಸಂಭಾವನೆ ರಾಜಮೌಳಿಯದ್ದು. ಸಿನಿಮಾ ಒಟ್ಟು ಎಷ್ಟು ಗಳಿಕೆಯಾಗುತ್ತದೋ ಅದರ ಲಾಭದಲ್ಲಿ ಮೂರನೇ ಒಂದರಷ್ಟು ಭಾಗ ಇವರಿಗೆ ಸೇರಬೇಕು ಎಂಬುದು ಒಪ್ಪಂದವಾಗಿದೆ.
ಬಾಹುಬಲಿ-2 ಸ್ಯಾಟಲೈಟ್ ಹಕ್ಕುಗಳು ಕೂಡ 4 ಭಾಷೆಗಳಿಂದ 438 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ದೇಶದ ಯಾವ ಸಿನಿಮಾವನ್ನು ಟೀವಿ ಮಾಲೀಕರು ಇಷ್ಟು ಭರ್ಜರಿ ಮೊತ್ತಕ್ಕೆ ಕೊಂಡುಕೊಂಡಿರಲಿಲ್ಲ.