ಇತ್ತೀಚಿಗೆ ಲಂಡನಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಹುಬಲಿಯ ಮೂರನೇ ಭಾಗ ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಇದು ಕೂಡ ಮಾಹಿಷ್ಮತಿ ಪಟ್ಟಣದ ಪೌರಾಣಿಕ ಕಥನವಾಗಿರಲಿದ್ದು ಬೇರೆ ರಾಜವಂಶದ ಕಥೆಯನ್ನು ಹೇಳಲಾಗುತ್ತದೆ. ಪರಿಕಲ್ಪನೆಯಲ್ಲಿನ ಪಟ್ಟಣ ಒಂದೇ ಆದರೂ ಸಾರಾಂಶ ಬೇರೆಯದ್ದಾಗಿರುತ್ತದೆ' ಎಂಬುದಾಗಿ ನಿರ್ದೇಶಕರು ಹೇಳಿದ್ದಾರೆ.
ಹೈದರಾಬಾದ್(ಮೇ.06): ಪ್ರೇಕ್ಷಕರಿಗೆ ಬಾಹುಬಲಿಯ ಮತ್ತೊಂದು ಅದ್ಭುತ ರಸದೌತಣ ಉಣಬಡಿಸಲು ನಿರ್ದೇಶಕ ರಾಜಮೌಳಿ ಸಿದ್ದರಾಗಿದ್ದಾರೆ. ಈಗಾಗಲೇ ಬಾಹುಬಲಿ 1 ಮತ್ತು 2 ಭಾಗಗಳನ್ನು ನಿರ್ದೇಶಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿರುವ ಮೌಳಿ ಮೂರನೇ ಭಾಗಕ್ಕೆ ಅಣಿಯಾಗುತ್ತಿದ್ದಾರೆ.
ಇತ್ತೀಚಿಗೆ ಲಂಡನಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಬಾಹುಬಲಿಯ ಮೂರನೇ ಭಾಗ ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಇದು ಕೂಡ ಮಾಹಿಷ್ಮತಿ ಪಟ್ಟಣದ ಪೌರಾಣಿಕ ಕಥನವಾಗಿರಲಿದ್ದು ಬೇರೆ ರಾಜವಂಶದ ಕಥೆಯನ್ನು ಹೇಳಲಾಗುತ್ತದೆ. ಪರಿಕಲ್ಪನೆಯಲ್ಲಿನ ಪಟ್ಟಣ ಒಂದೇ ಆದರೂ ಸಾರಾಂಶ ಬೇರೆಯದ್ದಾಗಿರುತ್ತದೆ' ಎಂಬುದಾಗಿ ನಿರ್ದೇಶಕರು ಹೇಳಿದ್ದಾರೆ.
ನಮ್ಮ ತಂದೆ ವಿಜಯೇಂದ್ರ ಪ್ರಸಾದ್ ಅವರು ಕೂಡ 3ನೇ ಭಾಗದ ಕಥೆ ಬರೆಯುದಾಗಿ ಒಪ್ಪಿಕೊಂಡಿದ್ದು, ಎರಡೂ ಭಾಗಗಳಿಂತ ಮೂರನೆಯ ಕಥೆ ಇನ್ನಷ್ಟು ಗಟ್ಟಿಯಾಗಿರುತ್ತದೆ. ಅವರ ಬರವಣಿಗೆಗೆ ತಕ್ಕಂತೆ ತಂತ್ರಜ್ಞಾನವನ್ನು ಇನ್ನು ಅತ್ಯದ್ಭುತವಾಗಿ ತೆರೆಗೆ ಇಳಿಸುವುದಾಗಿ ರಾಜಮೌಳಿಯ ಇಂಗಿತವಾಗಿದೆ. 2ನೇ ಭಾಗದ ಬಾಕ್ಸ್ ಆಫೀಸ್ ವಿಶ್ವದಾದ್ಯಂತ ಧೂಳೆಬ್ಬಿಸಿದ್ದು ಇಲ್ಲಿಯವರೆಗಿನ ಬಾಲಿವುಡ್'ನ ಎಲ್ಲ ದಾಖಲೆಗಳನ್ನು ಮುರಿದು 600 ಕೋಟಿಗೂ ಹೆಚ್ಚಿನ ಹಣ ಗಳಿಕೆಯಾಗಿದೆ. ರಾಜಮೌಳಿ ಈಗಾಗಲೇ ಅಮೀರ್ ಖಾನ್ ಅವರ ಮುಂದಿನ ಚಿತ್ರ ಮಹಾಭಾರತ ನಿರ್ದೇಶ ಸಹಿ ಹಾಕಿದ್ದಾರೆ.
