ಬೆಂಗಳೂರು (ಜ.18): ತಮಿಳಿನ ಕ್ಷಣಂ ಚಿತ್ರ ಕನ್ನಡಕ್ಕೆ ರಿಮೇಕಾಗುತ್ತಿದೆ. ನಿರ್ದೇಶಕ ಕೆ ಎಂ ಚೈತನ್ಯ ಈ ಚಿತ್ರವನ್ನು ತೆರೆ ಮೇಲೆ ತರುತ್ತಿದ್ದಾರೆ. 

Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’

ಕಳೆದ ವರ್ಷವೇ ಭಾರೀ ಸ್ದು ಮಾಡಿದ್ದ ಈ ಚಿತ್ರ ಕಾರಣಾಂತರದಿಂದ ನಿಂತು ಹೋಗಿತ್ತು. ಈಗ ಮತ್ತೆ ಚಿತ್ರತಂಡ ವಾಪಸ್ಸಾಗಿದ್ದು ಚಿತ್ರದ ಶೂಟಿಂಗ್ ಮುಂದುವರೆಯಲಿದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸಂಚಲನ ಉಂಟು ಮಾಡುವಂತೆ ಮಾಡಿದ್ದ ಮೀಟೂ ಆರೋಪ ಶೃತಿ ಹರಿಹರನ್ ಕೆಲ ದಿನಗಳಿಂದ ಸಿನಿಮಾ ಶೂಟಿಂಗ್ ನಿಂದ ದೂರ ಉಳಿದಿದ್ದರು. ಈಗ ವಾಪಸ್ಸಾಗಿದ್ದಾರೆ.  

ಶೃತಿ ಹರಿಹರನ್ ಮೀಟೂ ಎಲ್ಲಿವರೆಗೆ ಬಂತು?

ಈ ಚಿತ್ರದಲ್ಲಿ ಶೃತಿ ಹರಿಹರನ್ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿಗೆ ಕಾಣಿಸಿಕೊಳ್ಳಲು ಇಬ್ಬರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.  

ಶೃತಿ ಹರಿಹರನ್ ಈಗಾಗಲೇ ಅವರ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಡಬ್ಬಿಂಗ್ ಮಾತ್ರ ಬಾಕಿ ಉಳಿದಿದೆ. ಈ ವಾರ ಅದನ್ನು ಮುಗಿಸಲಿದ್ದಾರೆ. ಉಳಿದ ಚಿತ್ರೀಕರಣವನ್ನು ಶೀಘ್ರದಲ್ಲೇ ಮುಗಿಸಲಿದ್ದೇವೆ ಎಂದು ನಿರ್ದೇಶಕ ಚೈತನ್ಯ ಹೇಳಿದ್ದಾರೆ.