ಮುಂಬೈ (ಆ. 20):  ಶ್ರೀದೇವಿಯ ಇಂಗ್ಲೀಷ್- ವಿಂಗ್ಲೀಷ್ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಟಿ ಸುಜಾತ ಕುಮಾರ್ ಕ್ಯಾನ್ಸರ್ ನಿಂದ ನಿನ್ನೆ ರಾತ್ರಿ ನಿಧನ ಹೊಂದಿದರು. 

ಕಳೆದ ಕೆಲದಿನಗಳಿಂದ ಸುಜಾತಾ ಕುಮಾರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.  ಸುಜಾತ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. 

 

2012 ರಲ್ಲಿ ಬಂದ ಶ್ರೀದೇವಿಯವರ ಇಂಗ್ಲೀಷ್- ವಿಂಗ್ಲೀಷ್ ಚಿತ್ರದಲ್ಲಿ ಸುಜಾತಾ ಕುಮಾರ್ ನಟಿಸಿದ್ದರು. ಕರಣ್ ಜೋಹರ್ ರವರ ಗೋರಿ ತೇರೆ ಪ್ಯಾರ್ ಮೇ, ಆನಂದ್ ಎಲ್ ರೈಯವರ ರಾಂಜಾನ ಚಿತ್ರದಲ್ಲೂ ಅಭಿನಯಿಸಿದ್ದರು. ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು.