ದಬಾಂಗ್ ಬಾಯ್ ಸಲ್ಮಾನ್ ಖಾನ್ ಗೆ ವರ್ಕೌಟ್ ಮಾಡೋದಂದ್ರೆ ಬಹಳ ಇಷ್ಟ ಅಂತೆ. ಬಿ-ಟೌನ್ ನ ಫಿಟೆಸ್ಟ್ ನಟರಲ್ಲಿ ಇವರು ಕೂಡಾ ಒಬ್ಬರು. ಮುಂಬೈನ ಬೀದಿಗಳಲ್ಲಿ ಇವರು ಸೈಕಲ್ ಓಡಿಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್ ಹುಟ್ಟುಹಾಕಿದೆ.
ಮುಂಬೈ (ಮಾ.09): ದಬಾಂಗ್ ಬಾಯ್ ಸಲ್ಮಾನ್ ಖಾನ್ ಗೆ ವರ್ಕೌಟ್ ಮಾಡೋದಂದ್ರೆ ಬಹಳ ಇಷ್ಟ ಅಂತೆ. ಬಿ-ಟೌನ್ ನ ಫಿಟೆಸ್ಟ್ ನಟರಲ್ಲಿ ಇವರು ಕೂಡಾ ಒಬ್ಬರು. ಮುಂಬೈನ ಬೀದಿಗಳಲ್ಲಿ ಇವರು ಸೈಕಲ್ ಓಡಿಸುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕ್ರೇಜ್ ಹುಟ್ಟುಹಾಕಿದೆ.
ಸಲ್ಮಾನ್ ಖಾನ್ ರವರ ಪಾನ್ವೆಲ್ ಫಾರ್ಮ್ ಹೌಸ್ ಸಮೀಪದ ರಸ್ತೆಗಳಲ್ಲಿ ಇವರು ಸೈಕಲ್ ರೈಡ್ ಮಾಡ್ತಾರೆ. ಬೂದು ಬಣ್ಣದ ಕ್ಯಾಪ್, ಕಪ್ಪು ಟ್ರಾಕ್ ಪ್ಯಾಂಟ್, ಬಿಳಿಬಣ್ಣದ ಸ್ನೀಕರ್ಸ್ ಹಾಗೂ ಕಿತ್ತಳೆ ಬಣ್ಣದ ಟೀ-ಶರ್ಟ್ ಹಾಕಿಕೊಂಡು ಸೈಕಲ್ ರೈಡ್ ಮಾಡ್ತಾ ಇದ್ರೆ ಇವರಿಗೆ 50+ ಆಗಿದೆ ಅಂತ ಅನ್ನಿಸೋದೆ ಇಲ್ಲ. ಇನ್ನು ಕಾಲೇಜು ಹುಡುಗನಂತೆ ಕಾಣಿಸುತ್ತಾರೆ.
