ನಟನೆಯಿಂದ ನಿರ್ಮಾಣದತ್ತ ಸ್ಪರ್ಶ ರೇಖಾ; ಬರ್ತಾ ಇದೆ ಇವರ ಹೊಸ ಚಿತ್ರ

entertainment | Saturday, March 24th, 2018
Suvarna Web Desk
Highlights

ಬಿಗ್‌'ಬಾಸ್ ಮನೆಗೆ ಹೋಗಿ ಬಂದದ್ದೇ ತಡ, ಮತ್ತೆ ಚಾಲ್ತಿಗೆ ಬಂದ ಸ್ಪರ್ಶ ರೇಖಾ,  ನಟನೆಯಲ್ಲೂ ಬಿಜಿಯಾದರು. ಇದೀಗ ಅವರು ಹೊಸ ಸಾಹಸಕ್ಕೂ ಕೈಹಾಕಿದ್ದಾರೆ. ಅವರು ನಿರ್ಮಿಸುತ್ತಿರುವ ಮೊದಲ ಚಿತ್ರ ಡೆಮೋಪೀಸ್ ಶುಕ್ರವಾರ ಸೆಟ್ಟೇರಿದೆ.

ಬೆಂಗಳೂರು (ಮಾ.24):  ಬಿಗ್‌'ಬಾಸ್ ಮನೆಗೆ ಹೋಗಿ ಬಂದದ್ದೇ ತಡ, ಮತ್ತೆ ಚಾಲ್ತಿಗೆ ಬಂದ ಸ್ಪರ್ಶ ರೇಖಾ,  ನಟನೆಯಲ್ಲೂ ಬಿಜಿಯಾದರು. ಇದೀಗ ಅವರು ಹೊಸ ಸಾಹಸಕ್ಕೂ ಕೈಹಾಕಿದ್ದಾರೆ. ಅವರು ನಿರ್ಮಿಸುತ್ತಿರುವ ಮೊದಲ ಚಿತ್ರ ಡೆಮೋಪೀಸ್ ಶುಕ್ರವಾರ ಸೆಟ್ಟೇರಿದೆ.

ಇದರ ನಿರ್ದೇಶಕ ವಿವೇಕ್.  ಅವರಿಗೂ ಇದು ಮೊದಲ ಚಿತ್ರ. ಕಿರುತೆರೆ ಪ್ರತಿಭೆ. ಭರತ್ ಈ ಚಿತ್ರದೊಂದಿಗೆ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಇದರ ಮುಹೂರ್ತಕ್ಕೆ ರಾಕಿಂಗ್ ಸ್ಟಾರ್ ಯಶ್ ಬಂದು ಹೊಸಬರಿಗೆ ಪ್ರೋತ್ಸಾಹ ನೀಡಿದ್ದಾರೆ. ‘ನಾನು ಬಣ್ಣ ಹಚ್ಚಿದ ಕ್ಷಣದಿಂದಲೂ ನಟನೆಯ ಜತೆಗೆ ನಿರ್ದೇಶಕಿ ಆಗುವ ಆಸೆಯಿತ್ತು. ಆ ನಿಟ್ಟಿನಲ್ಲಿ  ಒಂದಷ್ಟು ಪ್ರಯತ್ನಗಳೂ ನಡೆದವು. ಆದರೂ, ನಿರ್ದೇಶಕಿ ಆಗುವ ನನ್ನ ಕನಸು ನನಸಾಗಲಿಲ್ಲ. ಈ ನಡುವೆ ನಟನೆಗೂ ಒಂದಷ್ಟು ಕಾಲ ಬ್ರೇಕ್ ತೆಗೆದುಕೊಂಡೆ. ನಿರ್ದೇಶಕಿ ಆಗಬೇಕೆಂದುಕೊಂಡಿದ್ದು ಹಾಗೆಯೇ ಉಳಿಯಿತು. ಒಂದಷ್ಟು ಗ್ಯಾಪ್ ನಂತರ ನಾನು ಮತ್ತೆ ಬಣ್ಣ ಹಚ್ಚಿದ್ದು ಬಿಗ್  ಬಾಸ್‌ಗೆ ಹೋಗಿ ಬಂದ ನಂತರ. ಬಿಗ್‌ಬಾಸ್‌ಗೆ  ಹೋಗಿ ಬಂದ ನಂತರ ಸಿನಿಮಾದ ಅವಕಾಶಗಳು ಬರುತ್ತಿವೆ. ಅದರಲ್ಲೂ ಒಳ್ಳೆಯ ಪಾತ್ರಗಳೇ  ಸಿಗುತ್ತಿವೆ. ಹೀಗಾಗಿ ಮತ್ತೆ ಬಣ್ಣದ ಲೋಕದ ನಂಟು  ಜಾಸ್ತಿ ಆಗುತ್ತಿರುವ ಬೆನ್ನಲೇ ನಾನೊಂದು ಸಿನಿಮಾ ಆಸೆ ಹುಟ್ಟಿತ್ತು. ಸ್ನೇಹಿತರು ಕೂಡ ಅದಕ್ಕೆ ಸಾಥ್  ನೀಡುವುದಾಗಿ ಭರವಸೆ ನೀಡಿದ್ದರು.ಎಲ್ಲವೂ ಕೂಡಿ ಬರುತ್ತವೆ ಅಂತಾರಲ್ಲ ಹಾಗೆ ವಿವೇಕ್ ಒಂದು ಕತೆ ಹೇಳಿದರು. ಆ ಕತೆ ನಮಗಿಷ್ಟವಾಯಿತು.ಅದೇ  ಈಗ  ಡೆಮೋಪೀಸ್.

ಏಪ್ರಿಲ್ ಮೊದಲ ವಾರದಿಂದ ಚಿತ್ರೀಕರಣ ಶುರುವಾಗುತ್ತಿದೆ. ಕಿರುತೆರೆ ಪ್ರತಿಭೆ ಭರತ್ ನಾಯಕ. ಸೋನಲ್ ನಾಯಕಿ. ಚಕ್ರವರ್ತಿ ಚಂದ್ರ ಚೂಡ್ ಈ ಚಿತ್ರದ ವಿಲನ್. 

Comments 0
Add Comment

    ಅಂಬಿ ಪುತ್ರನ ಬಗ್ಗೆ ಕುತೂಹಲದ ಸುದ್ದಿಯಿದು

    entertainment | Saturday, May 26th, 2018