ಏ.29ರಂದು ಪಾರ್ಟಿ ಮುಗಿದ ಬಳಿಕ ಸೋನಿಕಾರನ್ನು ಅವರ ನಿವಾಸಕ್ಕೆ ಕರೆದೊಯ್ಯುವ ವೇಳೆ ನಟ ವಿಕ್ರಂ ಅವರ ರಾಶ್ ಡ್ರೈವಿಂಗ್ ಪರಿಣಾಮ ರಸ್ತೆ ಅಪಘಾತದಲ್ಲಿ ನಟಿ ಸಾವಿಗೀಡಾಗಿದ್ದಳು.

ಕೋಲ್ಕತಾ(ಜು.08): ರಸ್ತೆ ಅಪಘಾತದಲ್ಲಿ ಮುಂಬೈ ಮೂಲದ ಮಾಡೆಲ್ ಮತ್ತು ಟಿವಿ ನಿರೂಪಕಿ ಸೋನಿಕಾ ಚೌಹಾಣ್ ಅವರ ಹತ್ಯೆಗೈದ ಆರೋಪ ಎದುರಿಸುತ್ತಿರುವ ನಟ ಬೆಂಗಾಳಿ ನಟ ವಿಕ್ರಂ ಚಟರ್ಜಿ ಅವರನ್ನು ಪೊಲೀಸರು ಬಂಸಿದ್ದಾರೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಚಟರ್ಜಿ ತಲೆ ಮರೆಸಿಕೊಂಡಿದ್ದ. ನಟ ವಿಕ್ರಂನನ್ನು ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತಾದ ಬಳಿ ಗುರುವಾರ ಮಧ್ಯರಾತ್ರಿ ಬಂಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಅವರನ್ನು ಕೋಲ್ಕತಾದಲ್ಲಿರುವ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಟಿವಿ ನಿರೂಪಕಿ ಸೋನಿಕಾ ಚೌಹಾನ್ ಹತ್ಯೆ ಸಂಬಂಧ ಕಳೆದ ಮಂಗಳವಾರವಷ್ಟೇ ಆರೋಪಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿತ್ತು. ಏ.29ರಂದು ಪಾರ್ಟಿ ಮುಗಿದ ಬಳಿಕ ಸೋನಿಕಾರನ್ನು ಅವರ ನಿವಾಸಕ್ಕೆ ಕರೆದೊಯ್ಯುವ ವೇಳೆ ನಟ ವಿಕ್ರಂ ಅವರ ರಾಶ್ ಡ್ರೈವಿಂಗ್ ಪರಿಣಾಮ ರಸ್ತೆ ಅಪಘಾತದಲ್ಲಿ ನಟಿ ಸಾವಿಗೀಡಾಗಿದ್ದಳು.