ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಂ ಕಪೂರ್

Sonam Kapoor And Anand Ahuja Are Married
Highlights

ಬಾಲಿವುಡ್ ನಟಿ ಸೋನಮ್ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಫ್ಯಾಷನ್ ಉದ್ಯಮಿ ಆನಂದ್ ಅಹುಜಾ ಕೈ ಹಿಡಿದಿದ್ದು ಈ ಮೂಲಕ ಸೋನಮ್ ಕಪೂರ್ ಅಹುಜಾ ಆಗಿದ್ದಾರೆ. 

ಮುಂಬೈ :   ಬಾಲಿವುಡ್ ನಟಿ ಸೋನಮ್ ಕಪೂರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಫ್ಯಾಷನ್ ಉದ್ಯಮಿ ಆನಂದ್ ಅಹುಜಾ ಕೈ ಹಿಡಿದಿದ್ದು ಈ ಮೂಲಕ ಸೋನಮ್ ಕಪೂರ್ ಅಹುಜಾ ಆಗಿದ್ದಾರೆ. ಈ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೆಲೆಬ್ರಿಟಿಗಳ ಸಾಲಿನಲ್ಲಿ ಸೋನಮ್ ಕೂಡ ಸೇರ್ಪಡೆಗೊಂಡಿದ್ದಾರೆ 

ಮದುವೆಯ ಸಂದರ್ಭದಲ್ಲಿ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದ ಸೋನಮ್  ವಿವಿಧ ರೀತಿಯಾದ ಸಾಂಪ್ರದಾಯಿಕ ಆಭರಣಗಳಲ್ಲಿ ಪಂಜಾಬಿ ವಧುವಾಗಿ ಕಂಗೊಳಿಸುತ್ತಿದ್ದರು. ಅಲ್ಲದೇ  ಈ ಧಿರಿಸಿನಲ್ಲಿ ಧರೆಗಿಳಿದ ಅಪ್ಸರೆಯಂತೆಯೇ ಮಿನುಗುತ್ತಿದ್ದರು. 

ಸಿಖ್ ಸಂಪ್ರದಾಯದಂತೆ ಆನಂದ್ ಹಾಗೂ ಸೋನಮ್ ವಿವಾಹವೂ ಮುಂಬೈನ ಬಾಂದ್ರಾ ಬಂಗ್ಲೆಯಲ್ಲಿ ನೆರವೇರಿದೆ. ಮದುವೆಯ ವೇಳೆ ಆನಂದ್ ಅಹುಜಾ ಬಂಗಾರದ ಬಣ್ಣದ ಶೇರವಾನಿಯಲ್ಲಿ ಮಿಂಚುತ್ತಿದ್ದರು. 

ಕಪೂರ್ ಕುಟುಂಬದ ಕುಡಿ ಸೋನಮ್ ಹಾಗೂ ಉದ್ಯಮಿ ಆನಂದ್ ಅಹುಜಾ ವಿವಾಹದಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಟಿ ಕರೀನಾ ಕಪೂರ್, ಸೈಫ್ ಅಲಿ ಖಾನ್, ಕರಿಷ್ಮಾ ಕಪೂರ್, ಅಮಿತಾ ಬಚ್ಚನ್, ನಟ ಅಮಿರ್ ಖಾನ್, ಪತ್ನಿ ಕಿರಣ್ ರಾವ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಸಂದರ್ಭಕ್ಕೆ ಸಾಕ್ಷಿಯಾದರು. 

loader