ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದನ್ನು ಕೇಳಿ  ಎಲ್ಲರಿಗೂ ಶಾಕ್ ಆಗಿತ್ತು. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಹಿತೈಶಿಗಳು, ಚಿತ್ರರಂಗ ಎಲ್ಲರೂ ಹಾರೈಸಿದ್ದರು.ಹಾರೈಸಿದ ಎಲ್ಲರಿಗೂ ಸೋನಾಲಿ ಪತಿ ಗೋಲ್ಡಿ ಬೆಲ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಮುಂಬೈ (ಆ. 03): ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಇರುವುದನ್ನು ಕೇಳಿ ಎಲ್ಲರಿಗೂ ಶಾಕ್ ಆಗಿತ್ತು. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಹಿತೈಶಿಗಳು, ಚಿತ್ರರಂಗ ಎಲ್ಲರೂ ಹಾರೈಸಿದ್ದರು.ಹಾರೈಸಿದ ಎಲ್ಲರಿಗೂ ಸೋನಾಲಿ ಪತಿ ಗೋಲ್ಡಿ ಬೆಲ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಸದ್ಯ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ಕುಟುಂಬ ಕೂಡಾ ಇಲ್ಲೇ ಇದೆ. ಇದು ಸುದೀರ್ಘವಾದ ಪಯಣ. ನನ್ನ ಪತ್ನಿ ಗುಣಮುಖರಾಗಲೆಂದು ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಗೋಲ್ಡಿ ಹೇಳಿದ್ದಾರೆ. 

Scroll to load tweet…

ಸೋನಾಲಿ ತಮ್ಮ ಪುತ್ರನೊಂದಿಗಿನ ಫೋಟೊವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿ ಈ ಸಮಯ ತಮ್ಮ ಮಗ ಜನಿಸಿ 12 ವರ್ಷ 11ತಿಂಗಳು 8 ದಿನಗಳಾಗಿದೆ. ಗಂಭೀರವಾದ ಕಾಯಿಲೆಯಿಂದ ಬಳಲುತ್ತಿರುವ ತಮಗೆ ತಮ್ಮ ಪುತ್ರ ರಣ್ವೀರ್ ಸಕಾರಾತ್ಮಕ ಭಾವನೆಗಳ ಮೂಲ ಎಂದು ಹೇಳಿಕೊಂಡಿದ್ದರು. ಅಲ್ಲದೇ ಈ ಸಮಯದಲ್ಲಿ ತಾವು ಹೇಗೆ ಸಕಾರಾತ್ಮಕ ಚಿಂತನೆಗಳಿಂದ ದಿನ ಕಳೆಯುತ್ತಿರುವುದಾಗಿಯೂ ಕೂಡ ಅವರು ಇನ್ ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. 

View post on Instagram