ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅರೆಸ್ಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸೋನಾಕ್ಷಿಯನ್ನು ಅರೆಸ್ಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. 

ಈ ವಿಡಿಯೋ ನೋಡಿ ಅಭಿಮಾನಿಗಳು ಕಂಗಾಲಾಗಿದ್ದಾರೆ. ನಿಜವಾಗಿಯೂ ಅರೆಸ್ಟ್ ಆಗಿದ್ದಾರಾ? ಅಂತದ್ದೇನು ಮಾಡಿದ್ರು? ಅಂತ ಕನ್ಫ್ಯೂಸ್ ಆಗಬೇಡಿ.

 

 

ಈ ಬಗ್ಗೆ ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು,  Hii guys, ವಿಡಿಯೋ ನೋಡಿ ನೀವೆಲ್ಲಾ ನನ್ನ ಬಗ್ಗೆ ಕಾಳಜಿ, ಅಕ್ಕರೆ ತೋರಿಸುತ್ತಿದ್ದೀರಿ ಎಂದು ನನಗೆ ಗೊತ್ತು. ಆ ವಿಡಿಯೋದಲ್ಲಿರುವುದು ನಾನೇ. ಆದರೆ ಅದೂ ಪೂರ್ತಿ ಸತ್ಯವಲ್ಲ. ಸದ್ಯದಲ್ಲೇ ನಿಮ್ಮೊಂದಿಗೆ ಡಿಟೇಲನ್ನು ಶೇರ್ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.

 

ಸೋನಾಕ್ಷಿ ಸಿನ್ಹಾ ಅಭಿನಯದ ‘ಖಾಂದಾನಿ ಸಫಾಖಾನಾ’ ಚಿತ್ರ ರಿಲೀಸ್ ಆಗಿದ್ದು ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮುಂಬರುವ ಚಿತ್ರ ‘ಮಿಷನ್ ಮಂಗಲ್’ ಪ್ರಮೋಶನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಲು ಬಾಯ್ ಜೊತೆ ದಬಾಂಗ್ -3 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.