ಸೆಲೆಬ್ರಿಟಿಗಳ ಸಾಮಾಜಿಕ ಕಳಕಳಿ ಸಹಜ. ಅವರು ತೆಗೆದುಕೊಳ್ಳುವ ಪುಟ್ಟದೊಂದು ಹೆಜ್ಜೆ ಎಲ್ಲರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗುತ್ತದೆ. ಅಂಥದ್ದೊಂದು ಕೆಲಸಕ್ಕೆ ಕೈ ಜೋಡಿಸಿದ್ದಾರೆ ರಾಧಾ ಮಿಸ್ ಫೇಮ್ ಶ್ವೇತಾ ರಾಮ್ ಪ್ರಸಾದ್.

ವರ್ಲ್ಡ್ ಆ್ಯಂಬುಲೆನ್ಸ್ ಡೇ ಎಂಬ ಕ್ಯಾಂಪೇನ್‌ನಲ್ಲಿ ಜೀವ ಉಳಿಸುವುದರಲ್ಲಿ ಆ್ಯಂಬುಲೆನ್ಸ್ ಎಷ್ಟು ಪ್ರಾಮುಖ್ಯತೆ ಪಡೆಯುತ್ತದೆ ಎಂದು ಮಾತನಾಡಿದ್ದಾರೆ. ತನ್ನ ಬ್ಯುಜಿ ಶೆಡ್ಯೂಲ್‌ನಲ್ಲಿ ಇಂಥ ಕಾರ್ಯಕ್ಕೆ ಕೈ ಹಾಕಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದರ ಬಗ್ಗೆ ಒಂದೆರಡು ಮಾತುಗಳನ್ನಾಡಿದ್ದಾರೆ ‘ನನ್ನ ಬ್ಯುಜಿ ಜೀವನದಲ್ಲಿ ಒಂದರೆಡು ನಿಮಿಷ ಇವರಿಗೆ ಥ್ಯಾಂಕ್ಸ್ ಹೇಳಲು ಇಚ್ಛಿಸುತ್ತೇನೆ. ಡಾಕ್ಟರ್, ಟ್ರಾಫಿಕ್ ಪೊಲೀಸ್ ಹಾಗೂ ಆ್ಯಂಬುಲೆನ್ಸ್ ಡ್ರೈವರ್. ಇವರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ನನ್ನದೊಂದು ಸೆಲ್ಯೂಟ್ ಇವರೆಲ್ಲರಿಗೂ...ದಾರಿಯಲ್ಲಿ ಆ್ಯಂಬುಲೆನ್ಸ್ ಎದುರಾದರೆ ಮೊದಲು ಅವರಿಗೆ ಜಾಗ ಮಾಡಿ ಕೊಡೋಣ. ಅದು ನಮ್ಮ ಜೀವನದ ಪ್ರಯಾರಿಟಿ ಆಗಲಿ...’ಎಂದು ಬರೆದು ಕೊಂಡಿದ್ದಾರೆ.