ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಜಿಮ್ ಟ್ರೈನರ್ ಆಗಿದ್ದೇಕೆ..?

Shwetha Srivatsav Again Start Acting
Highlights

ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಮತ್ತೆ ಬಣ್ಣ ಹಚ್ಚಲು ರೆಡಿ ಆಗಿದ್ದಾರೆ. ಮಗು ಆದ್ಮೇಲೆ ತೂಕ ಇಳಿಸಿಕೊಂಡು ನಟನೆಗೆ ಬರಲು ತಾಲೀಮು ನಡೆಸಿದ್ದಾರೆ.

ಬೆಂಗಳೂರು : ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಮತ್ತೆ ಬಣ್ಣ ಹಚ್ಚಲು ರೆಡಿ ಆಗಿದ್ದಾರೆ. ಮಗು ಆದ್ಮೇಲೆ ತೂಕ ಇಳಿಸಿಕೊಂಡು ನಟನೆಗೆ ಬರಲು ತಾಲೀಮು ನಡೆಸಿದ್ದಾರೆ. ಮದುವೆ ಆದ್ಮೇಲೆ ನಟಿಯರಿಗೆ ಆಫರ್ ಕಮ್ಮಿ ಅನ್ನೋ ಹೊತ್ತಲ್ಲಿ, ಮದುವೆ ಅಲ್ಲ, ಒಂದು ಮಗು ಆದ್ಮೇಲೂ ಅವರಿಗೆ ನಟನೆಯ ಅವಕಾಶಗಳು ಬರುತ್ತಿರುವುದು ಅವರಲ್ಲೇ ಅಚ್ಚರಿ ತರಿಸಿದೆಯಂತೆ.

 ಸದ್ಯಕ್ಕೆ ಎರಡು ಸಿನಿಮಾಗಳಲ್ಲಿ ಅಭಿನಯಿಸಲು ಮಾತುಕತೆ ನಡೆದಿದೆಯಂತೆ. ಒಂದು ಚಿತ್ರದಲ್ಲಿ ಜಿಮ್ ಹಾಗೂ ಯೋಗ ಟ್ರೈನರ್ ಪಾತ್ರ. ಆ ಪಾತ್ರಕ್ಕೆ ತಕ್ಕಂತೆ ಫಿಟ್ ಆಗಿರಬೇಕು ಅನ್ನುವಷ್ಟು ಸ್ಲಿಮ್ ಆಗಿದ್ದೇನೆ. ಇನ್ನೊಂದು ತಿಂಗಳಲ್ಲಿ ಆ ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಿಲ್ಲ ಅಂತ ನಿರ್ದೇಶಕರು ಹೇಳಿದ್ದಾರೆ ಅಂತಾರೆ ನಟಿ ಶ್ವೇತಾ ಶ್ರೀವಾತ್ಸವ್.

loader