ಜನರಿಗೆ ಪರಿಭಾಷಾ ಸಿನಿಮಾಗಳ ಡಬ್ಬಿಂಗ್ ಬೇಕೇ ಬೇಕು ಅಂದ್ರೆ ರಾಜ್ಯದಲ್ಲಿ ಬೆರೆ ಯಾವ ಭಾಷೆಯ ಸಿನಿಮಾಗಳನ್ನೂ ಬಿಡುಗಡೆ ಮಾಡಬೇಡಿ. ಈ ಎಲ್ಲಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿಯೇ ಬಿಡುಗಡೆ ಮಾಡಿ. ಆಗ ಜನರಿಗೂ ಖುಷಿಯಾಗುತ್ತದೆ. ಕನ್ನಡಕ್ಕೂ ಒಳ್ಳೆಯದಾಗುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಉಡುಪಿ(ಜು.08): ಜನರಿಗೆ ಪರಿಭಾಷಾ ಸಿನಿಮಾಗಳ ಡಬ್ಬಿಂಗ್ ಬೇಕೇ ಬೇಕು ಅಂದ್ರೆ ರಾಜ್ಯದಲ್ಲಿ ಬೆರೆ ಯಾವ ಭಾಷೆಯ ಸಿನಿಮಾಗಳನ್ನೂ ಬಿಡುಗಡೆ ಮಾಡಬೇಡಿ. ಈ ಎಲ್ಲಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿಯೇ ಬಿಡುಗಡೆ ಮಾಡಿ. ಆಗ ಜನರಿಗೂ ಖುಷಿಯಾಗುತ್ತದೆ. ಕನ್ನಡಕ್ಕೂ ಒಳ್ಳೆಯದಾಗುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, 'ಡಬ್ಬಿಂಗ್ ಮಾಡುವುದು 'ವರ್ತ್' ಎಂದು ನನಗೆ ಅನ್ನಿಸುವುದಿಲ್ಲ. ಆದರೆ ಜನರಿಗೆ ಬೇಕು ಅಂದರೆ ಬೇಡ ಎನ್ನುವುದನಕ್ಕೆ ನಾನು ಯಾರು? ಅವರ ಮನೋರಂಜನೆಗಾಗಿ ಸಿನಿಮಾ ಮಾಡುವುದು ತಾನೇ? ಜನರು ಇಷ್ಟಪಟ್ಟರೆ ಹೂಂ ಎನ್ನಬೇಕೇ ಹೊರತು ಊಹೂಂ ಎನ್ನುವುದಕ್ಕಾಗುವುದಿಲ್ಲ. ಆದ್ದರಿಂದ ಜನರ ಅಭಿಪ್ರಾಯಕ್ಕೆ ನಾನು ಬದ್ಧವಾಗಿರುತ್ತೇನೆ' ಎಂದು ಅವರು ತಿಳಿಸಿದರು. 'ಹಿಂದೆ ನಾನು ವಿರೋಧಿಸಿದ್ದು ನಿಜ. ಕನ್ನಡ ಸಿನಿಮಾ ಇಂಡಸ್ಟ್ರಿಯ ಕಾರ್ಮಿಕರ ಹಿತದೃಷ್ಟಿಯಿಂದ ಡಬ್ಬಿಂಗ್ ಬೇಡ ಎಂದಿದ್ದೆ. ಆದರೆ ಈ ವ್ಯವಹಾರಿಕ ದೃಷ್ಟಿಂಯಿಂದ ಬೇಡ ಎನ್ನಲು ಸಾಧ್ಯವಿಲ್ಲ' ಎಂದಿದ್ದಾರೆ.
ನಾಣು ರಾಜಕೀಯ ಸೇರುವುದು ಸುಳ್ಳು
'ನನಗೆ ರಾಜಕೀಯ ಇಷ್ಟ ಇಲ್ಲ. ಆದ್ದರಿಂದ ಆ ಕ್ಷೇತ್ರಕ್ಕೆ ನಾನು ಪ್ರವೇಶ ಮಾಡುವುದಿಲ್ಲ' ಎಂದು ಶಿವರಾಜ್ ಕುಮಾರ್ ಸ್ಪಷ್ಪಡಿಸಿದ್ದಾರೆ. 'ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೆ ಮೊದಲು ಜನರಿಗೆ ತಿಳಿಸುತ್ತೇನೆ' ಎಂದಿರುವ ಶಿವಣ್ಣ ತಮ್ಮ ಪತ್ನಿ ಮತ್ತೆ ಚುನಾವಣೆಗೆ ನಿಲ್ಲುವ ಬಗ್ಗೆಯೂ ಅಲ್ಲಗಳೆದರು.
'ರಾಹುಲ್ ಗಾಂಧಿಯವರು ಅಮ್ಮನ ಸಾವಿನ ಹಿನ್ನೆಲೆಯಲ್ಲಿ ಸಾಂತ್ವನ ಹೇಳಲು ಬಂದಿದ್ದರು. ಅವರ ಬಗ್ಗೆ ಗೌರವ ಇದೆ. ಹೀಗೆಂದ ಮಾತ್ರಕ್ಕೆ ರಾಜಕೀಯಕ್ಕೆ ಬರುತ್ತೇವೆ ಎಂಬುವುದು ಹಸಿ ಸುಳ್ಳು' ಎಂದಿದ್ದಾರೆ.
