ಇದಕ್ಕೆ ಕೋಪಗೊಂಡು ಕೊಲೆ ಮಾಡಲು ಯೋಜನೆ ರೂಪಿಸಿದಳು. ಮೊದಲು ಗಂಡ ಊಟ ಮಾಡುವಾಗ ಆಹಾರಕ್ಕೆ ನಿದ್ರೆ ಮಾತ್ರೆ ಬೆರಸಿ ಮಲಗಿಸಿದ್ದಾಳೆ.
ಬೆಂಗಳೂರು(ಮೇ.29): ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮಹಿಳೆಯೊಬ್ಬಳು ಅಕ್ರಮ ಸಂಬಂಧ ಪ್ರಶ್ನಿಸಿದ ಪತಿಯನ್ನೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿಸಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿದ್ದ ಕಲ್ಪನಾ ಎಂಬಾಕೆ ಚೌಕ ಚಿತ್ರದಲ್ಲಿ ನಟಿಸಿದ್ದ ಜಾವೇದ್ ಎಂಬುವವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇವರಿಬ್ಬರ ಅಕ್ರಮ ಸಂಬಂಧವನ್ನು ಕಲ್ಪನಾಳ ಪತಿ ಸತೀಶ್ ಪ್ರಶ್ನಿಸಿದ್ದ. ಇದಕ್ಕೆ ಕೋಪಗೊಂಡು ಕೊಲೆ ಮಾಡಲು ಯೋಜನೆ ರೂಪಿಸಿದಳು. ಮೊದಲು ಗಂಡ ಊಟ ಮಾಡುವಾಗ ಆಹಾರಕ್ಕೆ ನಿದ್ರೆ ಮಾತ್ರೆ ಬೆರಸಿ ಮಲಗಿಸಿದ್ದಾಳೆ. ನಂತರ ಜಾವೇದ್'ನನ್ನು ಕರೆಸಿ ಇಬ್ಬರು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ಒಂದು ವಾರದ ಹಿಂದೆ ಪ್ರಕರಣ ನಡೆದಿದ್ದು, ಯಶವಂತಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
