ಬೆಂಗಳೂರು(ಸೆ.16): ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ದೊಡ್ಮನೆ ಹುಡ್ಗ' ಸಿನಿಮಾ ಸೆ.30ಕ್ಕೆ ಬಿಡುಗಡೆಗೊಳ್ಳಲಿದೆ. ಈ ಹಿಂದೆ ಸೆ.23ಕ್ಕೆ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿತ್ತು. ಆದರೆ ಕಾವೇರಿ ಹೋರಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಚಿತ್ರವನ್ನು ಒಂದು ವಾರ ಮುಂದಕ್ಕೆ ಹಾಕಿದೆ.

ಬಿಡುಗಡೆಗೂ ಮುನ್ನ ಹಾಡುಗಳಿಂದಲೇ ಸುದ್ದಿ ಮಾಡಿರುವ ‘ದೊಡ್ಮನೆ ಹುಡ್ಗ' ಪುನೀತ್ ಅವರ 25 ನೇ ಚಿತ್ರ ಇದ್ದಾಗಿದ್ದು, ನಿರ್ದೇಶಕ ಸೂರಿ ಜೊತೆ ಇದು 3ನೇ ಚಿತ್ರ ಹಾಗೂ ರಾಧಿಕಾ ಪಂಡಿತ್ ಜೊತೆಯಲ್ಲಿ ಎರಡನೇ ಬಾರಿಗೆ ಪುನೀತ್ ಕಾಣಿಸಿಕೊಂಡಿದ್ದಾರೆ. 

ಚಿತ್ರದಲ್ಲಿ ಅಂಬರೀಶ್, ಭಾರತೀ ವಿಷ್ಣುವರ್ಧನ್ ಸೇರಿದಂತೆ ಸುಮಲತಾ, ರವಿಶಂಕರ್, ರಂಗಾಯಣ ರಘು ಜೊತೆಯಲ್ಲಿ ಹಿರಿಯ ನಟ-ನಟಿಯರ ದಂಡೆ ಸೇರಿದೆ. ಬಿಡುಗಡೆಗೂ ಮುನ್ನ ಹಾಡುಗಳಿಂದಲೇ ಸುದ್ಧಿ ಮಾಡಿದ ಸಿನಿಮಾಕ್ಕೆ ಸತ್ಯಹೆಗಡೆ ಛಾಯಗ್ರಾಹಣ, ಹರಿಕೃಷ್ಣ ಅವರ ಸಂಗೀತವಿದೆ. ಗೋವಿಂದ ಚಿತ್ರ ನಿರ್ಮಾಣ ಮಾಡಿದ್ದಾರೆ.