ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಚಿತ್ರಕ್ಕಾಗಿ ನಟಿ ಅನುಷ್ಕಾ ಶರ್ಮಾ ಹೊಸ ಅವತಾರವೆತ್ತಿದ್ದಾರೆ. ಬಾಲಿವುಡ್ ಬ್ಯೂಟಿಯ ಹೊಸ ಲುಕ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಮುಂಬೈ (ಮೇ.29 ): ಬಾಲಿವುಡ್ ಹಿರಿಯ ನಟ ಸಂಜಯ್ ದತ್ ಜೀವನಾಧಾರಿತ ಸಂಜು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ರಣಬೀರ್ ಕಪೂರ್ ನಾಯಕನಾಗಿರುವು ಈ ಚಿತ್ರ ಈಗಾಗಲೇ ಬಾರಿ ನಿರೀಕ್ಷೆ ಹುಟ್ಟುಹಾಕಿದೆ. ಸಂಜಯ್ ದತ್ ಅನುಕರಣೆ ಮಾಡಿರುವ ನಾಯಕ ನಟ ರಣ್‌ಬೀರ್ ಕಪೂರ್ ಪೋಸ್ಟರ್‌ಗಳು ಬಾರಿ ಸದ್ದು ಮಾಡಿತ್ತು. ಇದೀಗ ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ನಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಹೊಸ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿದೆ. ಈ ಚಿತ್ರಕ್ಕಾಗಿ ನೀಲಿ ಕಣ್ಣುಗಳು, ಕರ್ಲಿ ಹೇರ್ ಮಾಡಿಸಿಕೊಂಡಿರುವ ಅನುಷ್ಕಾ ಶರ್ಮಾ, ಡಿಫ್ರೆಂಟ್ ಲುಕ್‌ನಲ್ಲಿ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಇದೇ ಪೋಸ್ಟರ್‌ನಲ್ಲಿ ಅನುಷ್ಕಾ ಹಿಂಬಾಗದಲ್ಲಿ ಸಂಜಯ್ ದತ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಚಿತ್ರದ ಪೋಸ್ಟರನ್ನ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಅನುಷ್ಕಾ ಶರ್ಮಾ ಯಾರ ಪಾತ್ರವನ್ನ ನಿಭಾಯಿಸುತ್ತಿದ್ದಾರೆ ಅನ್ನೋದನ್ನ ಚಿತ್ರತಂಡ ರಹಸ್ಯವಾಗಿಟ್ಟಿದೆ. ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅನುಷ್ಕಾ ಪಾತ್ರ ಕುರಿತು ಬಹಿರಂಗಪಡಿಸಲಾಗುವುದು ಎಂದು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಹೇಳಿದ್ದಾರೆ. ಚಿತ್ರದ ಪೋಸ್ಟರ್‌ಗಳಲ್ಲಿ ರಣಬೀರ್ ಕಪೂರ್ ಪಾತ್ರವನ್ನ ಆವಾಹಿಸಿಕೊಂಡಂತಿದೆ. ಚಿತ್ರದ ಪೋಸ್ಟರ್‌ಗಳನ್ನ ಗಮನಿಸಿದ್ದರೆ, ಖುದ್ದು ಸಂಜಯ್ ದತ್ ಅವರೆ ಅಭಿನಯಿಸಿದಂತಿದೆ. ಮೇ 30ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾದಗಲಿದೆ. ಜೂನ್ 29ಕ್ಕೆ ಸಂಜು ಚಿತ್ರ ದೇಶ-ವಿದೇಶಗಳಲ್ಲಿ ತೆರಕಾಣಲಿದೆ.
