ತಮಿಳಿನ ಸದುರಂಗ ವೇಟೈ ಚಿತ್ರ ಕನ್ನಡಕ್ಕೆ ರೀಮೇಕು ಆಗುವ ಹೊತ್ತಿಗೆ ಜಗತ್ ಕಿಲಾಡಿ ಆಗಿದೆ. ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ ಸಿನಿಮಾ ಇದು. 

ಲಯನ್ ಆರ್ ರಮೇಶ್‌ಬಾಬು ನಿರ್ಮಾಣದ ಚಿತ್ರ. ‘ಜಗತ್ ಕಿಲಾಡಿ’. ಧೀರೇಂದ್ರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ ಇದೆ.ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಸಂಗೀತ ನಿರ್ದೇಶನವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿ.ಮನೋಹರ್ ಹಾಗೂ ಉಮೇಶ್ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು, ವಿಶ್ವ ಅವರ ಸಂಕಲನ ಚಿತ್ರಕ್ಕಿದೆ. ಅಮಿತಾ ಕುಲಾಳ್ ಚಿತ್ರದ ನಾಯಕಿಯಾಗಿದ್ದು ಜೈಜಗದೀಶ್, ವಿಶ್ವ, ರವಿಚೇತನ್, ಕೌಂಡಿನ್ಯ, ಮೈಕೋ ನಾಗರಾಜ್ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ ತನ್ನ ಬುದ್ದಿಯಿಂದ ಜನರನ್ನು ಹೇಗೆ ಮರಳು ಮಾಡುತ್ತ, ಹಣ ಮಾಡಿಕೊಂಡು ಹೇಗೆ ಜನರನ್ನು ಮೋಸ ಮಾಡುತ್ತಾನೆ ಎಂಬುದರ ಸುತ್ತ ಈ ಸಿನಿಮಾ ಸಾಗುತ್ತ.