ಚಿತ್ರತಂಡದ ಮೂಲಗಳ ಪ್ರಕಾರ ಮೊದಲ ದಿನದ ಅದರ ಒಟ್ಟು ಗಳಿಕೆ ಸುಮಾರು . 10 ಕೋಟಿಗೂ ಹೆಚ್ಚು. ಇದರಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಅವತರಣಿಕೆಗಳ ಒಟ್ಟು ಕಲೆಕ್ಷನ್‌ ಕೂಡ ಸೇರಿದೆ. ಸದ್ಯಕ್ಕೆ ಚಿತ್ರದ ಮೊದಲ ದಿನದ ಕಲೆಕ್ಷನ್‌ ಕುರಿತು ನಿಖರವಾದ ಮಾಹಿತಿ ನೀಡಲು ನಿರ್ಮಾಪಕ ಹಾಗೂ ನಿರ್ದೇಶಕ ಕೃಷ್ಣ ನಿರಾಕರಿಸುತ್ತಾರೆ.

ಚಿತ್ರ ವಿಮರ್ಶೆ; ಪೈಲ್ವಾನ್!

‘ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವ ಬಗ್ಗೆ ಖಾತರಿ ಇತ್ತು. ಆದರೆ ಕರ್ನಾಟಕದ ಆಚೆಗೂ ಇದು ಈ ಮಟ್ಟದಲ್ಲಿ ಸದ್ದು ಮಾಡಬಹುದೆಂದು ನಿರೀಕ್ಷಿಸಿರಲಿಲ್ಲ. ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಕಿಚ್ಚ ಸುದೀಪ್‌, ಸುನೀಲ್‌ ಶೆಟ್ಟಿ, ಆಕಾಂಕ್ಷ ಸಿಂಗ್‌ ಹಾಗೂ ಕಬೀರ್‌ ಸಿಂಗ್‌ ಮೂಲಕ ಹೊರ ರಾಜ್ಯಗಳಲ್ಲೂ ಗ್ರಾಂಡ್‌ ಎಂಟ್ರಿ ಪಡೆದಿದೆ. ಇದೇ ರೀತಿಯ ರೆಸ್ಪಾನ್ಸ್‌ ಒಂದು ವಾರ ಮುಂದುವರೆದರೆ, ಹಾಕಿದ ಬಂಡವಾಳ ನಮ್ಮ ಕೈ ಸೇರಲಿದೆ’ ಎನ್ನುವ ವಿಶ್ವಾಸದ ಮಾತುಗಳ ಮೂಲಕ ಗೆಲುವಿನ ನಗು ಬೀರುತ್ತಾರೆ ಕೃಷ್ಣ.

ಪೈಲ್ವಾನ್‌ ಗೆಲ್ಲಿಸುವ ತೂಕ ದೊಡ್ಮಗ ಸುದೀಪ್‌ಗೆ ಇದೆ: ರವಿಚಂದ್ರನ್‌

ಇನ್ನು ಶುಕ್ರವಾರದಿಂದ ‘ಪೈಲ್ವಾನ್‌’ ಹಿಂದಿ ಅವತರಣಿಕೆಯೂ ತೆರೆ ಕಂಡಿದೆ. ದೇಶಾದ್ಯಂತ 2500 ಕ್ಕೂ ಸ್ಕ್ರೀನ್‌ಗಳಲ್ಲಿ ಹಿಂದಿ ‘ ಪೈಲ್ವಾನ್‌’ ಹವಾ ಶುರುವಾಗಿದೆ. ಬಾಲಿವುಡ್‌ನಟ ಸಲ್ಮಾನ್‌ ಖಾನ್‌ ಕೂಡ ಶುಕ್ರವಾರ ಮುಂಬೈನಲ್ಲಿ ಸಿನಿಮಾ ನೋಡಿ , ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‘ ಪೈಲ್ವಾನ್‌ ಭಾವನೆ, ಹಾಸ್ಯ ಹಾಗೂ ಆ್ಯಕ್ಷನ್‌ ಮಿಶ್ರಣದಿಂದ ಕೂಡಿದ ಪಕ್ಕಾ ಮನರಂಜನೆ ಚಿತ್ರ’ ಎಂಬುದಾಗಿ ಟ್ವೀಟ್‌ ಮಾಡಿದ್ದಾರೆ.