ಭಾರತೀಯ ಚಿತ್ರರಂಗದಲ್ಲೇ ಧೂಳೆಬ್ಬಿಸಿದ್ದ ಕೆಜಿಎಫ್ ಚಾಪ್ಟರ್ 1ರ ನಂತರ ಇದೀಗ ಕೆಜಿಎಫ್  ಕೆಜಿಎಫ್ ಚಾಪ್ಟರ್ 2 ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಇದೆಲ್ಲದರ ನಡುವೆ ಕನ್ನಡದ ಅಭಿಮಾನಿಗಳಿಗೆ ಇಬ್ಬರು ಯಶ್ ಗಳನ್ನು ನೋಡುವ ಸೌಭಾಗ್ಯ.

ಯಶ್ ಅವರನ್ನೇ ಹೋಲುವ ಈ ವ್ಯಕ್ತಿಯ ಹೆಸರು ಆರ್ಯನ್ ದೀಕ್ಷತ್. ಬೆಂಗಳೂರಿನಲ್ಲಿ ಫಿಟ್ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿರುವ  ದೀಕ್ಷಿತ್ ಯಶ್ ಅವರನ್ನು ಭೇಟಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. 

ಕೆಜಿಎಫ್ 2 ನಲ್ಲಿ ಬಾಲಿವುಡ್ ತಾರೆಗಳಾದ ಸಂಜಯ್ ದತ್ ಮತ್ತು ರವಿನಾ ಟಂಡನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು ಅಧಿಕೃತ ಮಾಹಿತಿ ಇಲ್ಲ.