Asianet Suvarna News Asianet Suvarna News

ಬ್ರಿಟಿಷ್ ಏರ್ವೇಸ್'ನ ಗಗನಸಖಿ ಗಣೇಶ್'ಗೆ ಹೇಳಿದ್ದೇನು?

ನಾನು ನಾರ್ತ್ ಇಂಡಿಯನ್. ನಿಮ್ಮ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾದಾಗ ನಾನು ಬೆಂಗಳೂರಿನಲ್ಲಿ ಓದುತ್ತಿದ್ದೆ. ಆಗ ಚಿತ್ರದ ಹಾಡುಗಳು ನನ್ನ ಸ್ನೇಹಿತೆಯರ ಮೂಲಕ ಕೇಳಿದೆ. ತುಂಬಾ ಚೆನ್ನಾಗಿತ್ತು. ಹೀಗಾಗಿ ಸಿನಿಮಾ ನೋಡಿದೆ.

Sandalwood gossip news

ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇತ್ತೀಚೆಗೆ ಬ್ರಿಟಿಷ್ ಏರ್‌ವೇಸ್‌ನಲ್ಲೊಂದು ಅಚ್ಚರಿ ಕಾದಿತ್ತು. ಮೊನ್ನೆ ಅವರು ಲಂಡನ್‌ಗೆ ಹೋಗಿದ್ದರಂತೆ. ವಾಪಸ್ಸು ಬರುವಾಗ ಬ್ರಿಟಿಷ್ ಏರ್‌ವೇಸ್ ಹತ್ತಿದ್ದಾರೆ. ಅದೇ ವಿಮಾನದ ಗಗನಸಖಿ ಗಣೇಶ್ ಬಳಿಗೆ ಓಡಿಬಂದು ‘ಸಾರ್ ನಿಮ್ಮ ಮುಂಗಾರು ಮಳೆ-2 ಸಿನಿಮಾ ಬಿಡುಗಡೆ ಯಾವಾಗ?’ ಎಂದು ಕೇಳಿದ್ದಾಳೆ! ಗಣೇಶ್‌ಗೆ ಆಗ ಅಚ್ಚರಿ. ‘ಬ್ರಿಟಿಷ್ ಏರ್‌ವೇಸ್‌ನ ಗಗನಸಖಿಗೆ ಮುಂಗಾರು ಮಳೆ-2 ಸಿನಿಮಾ ಹೇಗೆ ಗೊತ್ತು?’ ಎಂದು ಪ್ರಶ್ನಿಸಿದರಂತೆ. ‘ನಾನು ನಾರ್ತ್ ಇಂಡಿಯನ್. ನಿಮ್ಮ ಮುಂಗಾರು ಮಳೆ ಸಿನಿಮಾ ಬಿಡುಗಡೆಯಾದಾಗ ನಾನು ಬೆಂಗಳೂರಿನಲ್ಲಿ ಓದುತ್ತಿದ್ದೆ. ಆಗ ಆ ಚಿತ್ರದ ಹಾಡುಗಳು ನನ್ನ ಸ್ನೇಹಿತೆಯರ ಮೂಲಕ ಕೇಳಿದೆ. ತುಂಬಾ ಚೆನ್ನಾಗಿತ್ತು. ಹೀಗಾಗಿ ಸಿನಿಮಾ ನೋಡಿದೆ. ನಾನು ಕೆಲಸ ಮಾಡುವ ವಿಮಾನ ಲಂಡನ್‌ನಿಂದ ಬೆಂಗಳೂರಿಗೆ ಬರುತ್ತದೆ. ಒಮ್ಮೆ ಪ್ರಯಾಣ ಮಾಡಿದರೆ ಎರಡು ದಿನ ವಿಶ್ರಾಂತಿ ಇರುತ್ತದೆ. ಈಗ ಮುಂಗಾರು ಮಳೆ-2 ಬರುತ್ತಿದೆ ಅಂತ ಗೊತ್ತಾಗಿದ್ದು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ’ ಎಂದು ಗಗನಸಖಿ ಹೇಳಿದ್ದನ್ನು ಕೇಳಿ ಗಣೇಶ್ ಹುಬ್ಬು ಅರ್ಧ ಇಂಚು ಮೇಲಕ್ಕೆ ಹಾರಿತ್ತು. ಕನ್ನಡ ಗೊತ್ತಿಲ್ಲದಿದ್ದರೂ ಸಿನಿಮಾ ಗಡಿ ದಾಟಿ ಪ್ರಭಾವಿಸುವ ರೀತಿ, ಸಂಗೀತದ ಮೋಡಿ ಮುಂಗಾರು ಹುಡುಗನನ್ನು ಬೆರಗಿನ ಬಾಗಿಲಿಗೆ ತಂದು ನಿಲ್ಲಿಸಿತ್ತು!

Follow Us:
Download App:
  • android
  • ios