ಒಂದು ವಿಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿರುವ ಸಿನಿಮಾ ‘ಗಲ್ಲಿಬೇಕರಿ’.  

ಟ್ವಿನ್ ಟವರ್ ಎಂಟರ್‌ಟೈನ್‌ಮೆಂಟ್ ಪ್ರೈ. ಲಿಲಾಂಛನದಲ್ಲಿ ಎಂ.ಎಂ.ನಿರ್ಮಾಣದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮೊದಲ ಬಾರಿಗೆ ರಾಧಾ ಕೃಷ್ಣನ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಿಯಲ್ ಕತೆಯನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೊಲೀಸು ಮತ್ತು ಅವರ ಮಗಳು, ನಾಯಕನ ಪ್ರೀತಿ ಇವುಗಳ ಸುತ್ತ ಸಾಗುವ ಸಿನಿಮಾ. ಆದರೆ, ಚಿತ್ರದಲ್ಲಿ ತನ್ನ ಮಗಳನ್ನು ಪ್ರೀತಿಸುತ್ತಿರುವ ನಾಯಕನನ್ನೇ ಪೊಲೀಸ್ ಅಧಿಕಾರಿಯೇ ಮುಂದೆ ನಿಂತು ಸಾಯಿಸುತ್ತಾನೆ. ಸತ್ತವನು ಹೇಗೆ ವಾಪಸ್ಸು ಬರುತ್ತಾನೆ ಎಂಬುದು ಚಿತ್ರದ ಅಸಲಿ ತಿರುವು.

ರಮೇಶ್ ಕೊಯಿರಾ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಯರು. ಸಂತೋಷ್ ಕಿರಣ, ಆರ್ಯನ್. ಇವರೊಂದಿಗೆ ಪ್ರಜ್ವಲ್ ಪೂವಯ್ಯ, ಉಗ್ರಂ ರೆಡ್ಡಿ, ಸೂರ್ಯ, ರಮೇಶ್ ಭಟ್, ಸುಚೇಂದ್ರ ಪ್ರಸಾದ್ ನಟಿಸಿದ್ದಾರೆ.