ಈ ಹಿಂದೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಸಿನಿಮಾ ರಿಲೀಸ್ ಆಗಿ, ಮೂರು ವಾರಗಳ ನಂತರ ದರ್ಶನ್ ಚಕ್ರವರ್ತಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಪವರ್'ಸ್ಟಾರ್'ಗೆ ದರ್ಶನ್ ಸಹಾಯ ಮಾಡಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒಂದು ತ್ಯಾಗ ಮಾಡ್ತಾ ಇದ್ದಾರೆ. ಅದು ಏನು ಅಂತಾ ಕೇಳಿದರೆ ದರ್ಶನ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಥ್ರಿಲ್ ಆಗೋದು ಗ್ಯಾರಂಟಿ. ಕಳೆದ ಬಾರಿ ಪುನೀತ್'ಗೆ ದರ್ಶನ್ ಸಹಾಯ ಮಾಡಿದ್ದು. ಆದರೆ ಈ ಬಾರಿ ಪವರ್'ಸ್ಟಾರ್ ದರ್ಶನ್'ಗಾಗಿ ಆ ತ್ಯಾಗ ಮಾಡ್ತಾ ಇದ್ದಾರೆ.

ಈ ವರ್ಷದ ದಸರಾ ಹಬ್ಬಕ್ಕೆ ದರ್ಶನ್ ಅಭಿನಯದ ತಾರಕ್ ಹಾಹೂ ಪುನೀತ್ ನಟಿಸಿರೋ ಅಂಜನೀಪುತ್ರ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿದೆ. ಆದರೆ ದರ್ಶನ್ ತಾರಕ್ ಸಿನಿಮಾ ರಿಲೀಸ್ ನಂತರ, ಪುನೀತ್ ರಾಜ್ ಕುಮಾರ್ ಅಂಜನೀಪುತ್ರ ರಿಲೀಸ್ ಮಾಡುವ ಮೂಲಕ ಪವರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್'ಗೆ ತ್ಯಾಗ ಮಾಡ್ತಾ ಇದ್ದಾರೆ.

ಈ ಹಿಂದೆ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಸಿನಿಮಾ ರಿಲೀಸ್ ಆಗಿ, ಮೂರು ವಾರಗಳ ನಂತರ ದರ್ಶನ್ ಚಕ್ರವರ್ತಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ಪವರ್'ಸ್ಟಾರ್'ಗೆ ದರ್ಶನ್ ಸಹಾಯ ಮಾಡಿದ್ದರು. ಇದೀಗ ಪುನೀತ್ ದರ್ಶನ್ ತಾರಕ್ ಬಂದ ಮೇಲೆ ತಾನು ಬರುವುದಾಗಿ ಹೇಳಿದ್ದಾರೆ. ಸ್ಟಾರ್ ನಟರ ನಡುವೆ ಸ್ಪರ್ಧೆ ಇದೆ ಜೊತೆಗೆ ಇಂಥ ಒಳ್ಳೆಯ ಸ್ನೇಹವೂ ಇದೆ ಅನ್ನೋದಕ್ಕೆ ಇದೇ ಸಾಕ್ಷಿ. ಅದೇ ರೀತಿ ಈ ಬಾರಿ ದರ್ಶನ್ ಸಿನಿಮಾ ರಿಲೀಸ್ ನಂತರ ಪುನೀತ್ ಅಂಜನೀಪುತ್ರ ಎರಡು ವಾರಗಳ ಗ್ಯಾಪ್​ನಲ್ಲಿ ರಿಲೀಸ್ ಆಗಲಿದೆ. ಇದು ಸಾಕು ಅಲ್ವಾ ಪುನೀತ್ ಮತ್ತು ದರ್ಶನ್ ಒಳ್ಳೆಯ ಸ್ನೇಹಿತರು ಅನ್ನೋದಿಕ್ಕೆ.

- ರವಿಕುಮಾರ್ ಎಂಕೆ, ಸುವರ್ಣ ನ್ಯೂಸ್