ರಕ್ಷಿತ್ ಶೆಟ್ಟಿ ಜೊತೆ ಅವನೇ ಶ್ರೀಮನ್ನಾರಾಮಯಣ, ಗೋಲ್ಡನ್ ಗಣಿ ಜೊತೆ ಗೀತಾ , ರವಿಚಂದ್ರನ್ ಜೊತೆ ರವಿಚಂದ್ರ ಸಿನಿಮಾದಲ್ಲಿ ನಟಿಸಿರುವ ವಾರಣಾಸಿ ಮೂಲದ ಚೆಲುವೆ ಶಾನ್ವಿ ಶ್ರೀವಾಸ್ತವ್ ಸ್ಯಾಂಡಲ್ ವುಡ್ ನಲ್ಲಿ ಸಖತ್ ಹವಾ ಎಬ್ಬಿಸಿರುವ ನಟಿ. ಈಗ ಕಿರುತೆರೆಗೂ ಕಾಲಿಟ್ಟಿದ್ದಾರೆ. ಅರೇ, ಹೌದಾ ಎಂದು ಅಚ್ಚರಿಪಡಬೇಡಿ. 

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಧಾರಾವಾಹಿ ನಂದಿನಿ ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ನಂದಿನಿ ಕಥೆ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. 

 

ನಂದಿನಿ ಕಥಾ ನಾಯಕಿ ಜನನಿ ನಾಯಕ ವಿರಾಟ್ ರನ್ನು ಇಷ್ಟಪಡುತ್ತಿದ್ದಾರೆ. ಆದರೆ ಅವರ ಮದುವೆ ನಿಶ್ಚಯವಾಗಿರುವುದು ಖಳನಾಯಕನಾದ ಡಾಕ್ಟರ್ ರಾಮ್ ಜೊತೆ. ಈ ವಿಚಾರ ಜನನಿಗೆ ತಿಳಿದಿಲ್ಲ. ಮನೆಯವರು ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಥೆ ರೋಚಕ ಹಂತಕ್ಕೆ ತಲುಪಿದೆ. ಜನನಿ ಯಾರನ್ನು ಮದುವೆಯಾಗ್ತಾರೆ ಎಂಬುದೇ ಕುತೂಹಲ. ಏತನ್ಮಧ್ಯೆ ಶಾನ್ವಿ ಶ್ರೀವಾಸ್ತವ್ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗೆ ಇನ್ನಷ್ಟು ಕಳೆ ಬಂದಂತಾಗಿದೆ.