ಬೆಂಗಳೂರು :  ಚಿತ್ರೀಕರಣದ ವೇಳೆ ಆಯ ತಪ್ಪಿ ಬಿದ್ದು ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಪೆಟ್ಟಾಗಿದೆ. ಅವರದೇ ನಿರ್ಮಾಣದ ‘ಭೈರಾದೇವಿ’ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನ ಶಾಂತಿನಗರದ ಹಿಂದೂ ರುದ್ರಭೂಮಿಯಲ್ಲಿ ಫೆ.4ರಂದು ಮಧ್ಯರಾತ್ರಿ ಚಿತ್ರೀಕರಣ ನಡೆಯುತ್ತಿದ್ದಾಗ ಸಮಾಧಿಯ ಮೇಲಿನಿಂದ ಆಯತಪ್ಪಿ ಬಿದ್ದು ರಾಧಿಕಾ ಕುಮಾರಸ್ವಾಮಿ ಅವರ ಬೆನ್ನುಮೂಳೆಗೆ ಪೆಟ್ಟಾಗಿದೆ. ಚಿಕಿತ್ಸೆ ಪಡೆದ ನಂತರ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಘಟನೆಯಿಂದಾಗಿ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

‘ಅಮಾವಾಸ್ಯೆ ದಿನ ಮಧ್ಯರಾತ್ರಿ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ರಾಧಿಕಾ ಅವರು ತ್ರಿಶೂಲ ಹಿಡಿದು ಸಮಾಧಿ ಮೇಲಿಂದ ಕೆಳಗಿಳಿದು ಬರಬೇಕಿತ್ತು. ಆ ಸನ್ನಿವೇಶದಲ್ಲಿ ಅವರ ಗಮನ ಕ್ಯಾಮೆರಾದತ್ತ ಇತ್ತು. ಟೇಕ್‌ ಓಕೆ ಆದ ತಕ್ಷಣ ಅವರು ಕೆಳಗಿಯುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಚಿಕಿತ್ಸೆ ನೀಡಿದ ವೈದ್ಯರು ಒಂದಷ್ಟುದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ಶ್ರೀಜಯ್‌ ತಿಳಿಸಿದ್ದಾರೆ.

"