Asianet Suvarna News Asianet Suvarna News

ಅಪ್ಪು, ದಚ್ಚು, ಉಪ್ಪಿ ಓಡಿಸರೋ ಈ ಕಾರು ಯಾರದ್ದು?

ಅಪ್ಪು ಓಡಿಸಿದ ರೆಡ್ ಕಾರು ಯಾರದ್ದು?! ಅಪ್ಪು ಓಡಿಸಿದ ಕಾರನ್ನೇ ದಚ್ಚು, ಉಪ್ಪಿ ಓಡಿಸಿದ್ದೇಕೆ! ಸದ್ದು ಮಾಡ್ತಿದೆ ದುಬಾರಿ ಆಡಿ ಆರ್-8 ವಿ-10 ಪ್ಲಸ್ ಕಾರು! ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಆಡಿ ಕಾರು  

ಬೆಂಗಳೂರು(ಸೆ.14): ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಾ ಇದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರೈಡ್ ಮಾಡಿರೋ ರೆಡ್ ಕಾರು. ಈ ಕಾರಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 2 ಕೋಟಿ 70 ಲಕ್ಷ ರೂ.

ಹಾಗಾದ್ರೆ ಈ ದುಬಾರಿ ಆಡಿ ಆರ್-8 ವಿ-10 ಪ್ಲಸ್ ನ್ನು ಪುನೀತ್ ರಾಜಕುಮಾರ್ ಕೊಂಡು ಕೊಂಡಿದ್ದಾರಾ?. ಕೇವಲ ಪುನೀತ್ ಈ ಕಾರು ಓಡಿಸಿದ್ರೆ ಈ ಕಾರು ಅವರದ್ದೇ ಅನ್ನಬಹುದಿತ್ತು. ಆದರೆ ಇದೇ ಕಾರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಕೂಡ ಚಲಾಯಿಸಿ ಮಜಾ ಸವಿದಿದ್ದಾರೆ.

ಹಾಗಾದ್ರೆ ಸ್ಯಾಂಡಲ್ ವುಡ್ ನ ಘಟನಾಘಟಿ ಹೀರೋಗಳೆಲ್ಲಾ ಚಾಲನೆ ಮಾಡುತ್ತಿರುವ ಈ ಕಾರು ಯಾರದ್ದು ಗೊತ್ತಾ?. ಆಡಿ ಆರ್-8 ವಿ-10 ಪ್ಲಸ್ ನ್ನು ಖರೀದಿಸಿದ್ದು, ಸ್ಯಾಂಡಲ್ ವುಡ್ ನ ಜನಪ್ರಿಯ ನಿರ್ಮಾಪಕ ಸೌಂದರ್ಯ ಜಗದೀಶ್ ಅವರದ್ದು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories