ಹಿಂದಿಯ ಪ್ರಖ್ಯಾತ ರಿಯಾಲಿಟಿ ಶೋ ರೋಡೀಸ್'ನಲ್ಲಿ ಕರ್ನಾಟಕದ 'ಕಿರಿಕ್' ಹುಡುಗಿ ಸಂಯುಕ್ತಾ ಹೆಗ್ಡೆ ತನ್ನ ಬಾಲ್ಯದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪಾಲ್ಗೊಂಡಿರುವ ಸುದ್ದಿ ಎಲ್ಲರಿಗೂ ತಿಳಿದಿರುವಂತಹುದ್ದೇ. 18 ವರ್ಷದ ಸಂಯುಕ್ತಾ ರೋಡೀಸ್'ನಲ್ಲಿ ಭಾಗವಹಿಸಲು ಅವಕಾಶ ಪಡೆದ ಅತ್ಯಂತ ಕಿರಿಯ ವಯಸ್ಸಿನವಳು. ಆದರೂ ಇಲ್ಲಿ ಕಠಿಣ ಟಾಸ್ಕ್'ಗಳನ್ನು ಧೈರ್ಯದಿಂದ ಎದುರಿಸುತ್ತಿರುವ ಸಂಯುಕ್ತಾ ಇತರ ಸ್ಪರ್ಧಿಗಳಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಆದರೆ ಈಗ ಈ ಗಟ್ಟಿ ಮನಸ್ಸಿನ ಹುಡುಗಿ ಇತರ ಸ್ಪರ್ಧಿಗಳು ಮಾಡಿದ ಆರೋಪದಿಂದ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಅಷ್ಟಕ್ಕೂ ಇತರ ಸ್ಪರ್ಧಿಗಳು ಮಾಡಿದ ಆರೋಪವೇನು ಅಂತೀರಾ? ಇಲ್ಲಿದೆ ವಿವರ

ರೋಡೀಸ್'ನಲ್ಲಿ ನಡೆದ ಕೊನೆಯ ಎಪಿಸೋಡ್'ನಲ್ಲಿ ಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದರು. ಸ್ಪರ್ಧೆಯನುಸಾರ ಈ ವೇಳೆ ಎಲ್ಲಾ ಮಹಿಳಾ ಸ್ಪರ್ಧಿಗಳ ಬಳಿ ರೋಡೀಸ್'ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದ್ದು ಈ ವೇಳೆ ಬಹುತೇಕ ಮಂದಿ ಕೊಟ್ಟ ಉತ್ತರವನ್ನು ಸರಿ ಎಂದು ಪರಿಗಣಿಸಿ, ತಪ್ಪು ಉತ್ತರ ನೀಡಿದ ಮಹಿಳೆಯರ ಟೀಂನಲ್ಲಿರುವ ಯಾರಾದರೂ ಒಬ್ಬ ಹುಡುಗ ಲಡ್ಡು ತಿನ್ನಬೇಕಾಗುತ್ತಿತ್ತು. ಆಧರೆ ಆ ಲಡ್ಡು ಸಾಮಾನ್ಯದ್ದಾಗಿಲಿಲ್ಲ ತಿಂದವರ ಹೊಟ್ಟೆ ಕೆಡುವುದರಲ್ಲಿ ಅನುಮಾನವಿರಲಿಲ್ಲ.
ಇಂತಹ ಟಾಸ್ಕ್ ನೀಡಿದ್ದ ಸಂದರ್ಭದಲ್ಲಿ ಹೋಸ್ಟ್ 'ಇಲ್ಲಿ ಇರುವ ಸ್ಪರ್ಧಿಗಳಲ್ಲಿ ಹೆಚ್ಚಿಗೆ ಶೋ ಆಫ್(ತೋರ್ಪಡಿಕೆ) ಮಾಡುವ ಸ್ಪರ್ಧಿ ಯಾರು? ಎಂದು ಕೇಳಿದ್ದಾರೆ. ಈ ವೇಳೆ ಅಲ್ಲಿದ್ದ ಪ್ರತಿಯೊಬ್ಬ ಹುಡುಗಿಯೂ ಸಂಯುಕ್ತಾಳ ಹೆಸರನ್ನು ಬರೆದಿದ್ದರು. ಸಹ ಸ್ಪರ್ಧಿಗಳ ಈ ಉತ್ತರ ಕಂಡ ಸಂಯುಕ್ತಾ ಬಹಳಷ್ಟು ನೊಂದಿದ್ದಾಳೆ. ಆದರೂ ಕಿರಿಕ್ ಹುಡುಗಿ ಧೈರ್ಯದಿಂದಲೇ ನಾನು ಯಾವತ್ತು ಹಾಗೆ ನಡೆದುಕೊಂಡಿದ್ದೆ? ಎಂದು ಪ್ರಶ್ನಿಸಿದ್ದಾಳೆ. ಈಕೆಯ ಈ ಪ್ರಶ್ನೆಗೆ ಇತರ ಮಹಿಳಾ ಸ್ಪರ್ಧಿಗಳು ಈಕೆ ತನ್ನ ಸಿನಿಮಾ ಕುರಿತಾಗಿ ನಾವು ಕೇಳದಿದ್ದರೂ ಯಾವತ್ತೂ ಜಂಭ ಕೊಚ್ಚಿಕೊಳ್ಳುತ್ತಾಳೆ ಎಂದಿದ್ದಾರೆ. ಇವರ ಈ ಉತ್ತರ ಕೇಳಿದ ಸಂಯುಕ್ತಾ ಮಾತ್ರ ಕಣ್ಣೀರು ಸುರಿಸಿದ್ದಾಳೆ ಆದರೂ ತನ್ನನ್ನು ಸಮರ್ಥಿಸಿಕೊಳ್ಳುತ್ತಾ ತಾನ್ಯಾವತ್ತೂ ಹೀಗೆ ನಡೆದುಕೊಂಡಿಲ್ಲ. ಅವರೆಲ್ಲಾ ಕೇಳಿದ ಸಂದರ್ಭದಲ್ಲಷ್ಟೇ ಹೇಳಿದ್ದೇನೆ ಎಂದಿದ್ದಾಳೆ. ಈ ವೇಳೆ ಸಂಯುಕ್ತಾಳ ಮಾತುಗಳನ್ನು ಓರ್ವ ಪುರುಷ ಸ್ಪರ್ಧಿಯೂ ಬೆಂಬಲಿಸಿದ್ದಲ್ಲದೆ 'ನನಗೆ ಸಂಯುಕ್ತಾ ಹೇಗೆ ಎಂಬುವುದು ತಿಳಿದಿದೆ. ಆಕೆಯ ಬಳಿ ಒಂದು ವಿಚಾರದ ಕುರಿತಾಗಿ ಕೇಳಿದರಷ್ಟೇ ಉತ್ತರಿಸುತ್ತಾಳೆ. ಸುಮ್ಮ ಸುಮ್ಮನೆ ತನ್ನ ಕುರಿತಾಗಿ ಹೇಳಿಕೊಳ್ಳುವ ಹುಡುಗಿ ಆಕೆ ಅಲ್ಲ' ಎಂದಿದ್ದಾಳೆ.
ಇದೇ ವೇಳೆ ಸಂಯುಕ್ತಾ ಬೆಂಬಲಕ್ಕೆ ನಿಂತ ತಂಡದ ನಾಯಕರಾದ ಪ್ರಿನ್ಸ್ ಹಾಗೂ ರಣ್'ವಿಜಯ್ ಕೂಡಾ 'ಸಂಯುಕ್ತಾಳಷ್ಟು ಸಾಧನೆ ನಾನು ಮಾಡಿದ್ದರೆ ಇಷ್ಟೊತ್ತಿಗಾಗಲೇ ಆಕೆಗಿಂತ ದುಪ್ಪಟ್ಟು ಶೋ ಆಫ್ ಮಾಡಿಕೊಂಡಿರುತ್ತಿದ್ದೆವು' ಎಂದಿದ್ದಾರೆ. ಬಳಿಕ ಮಾತನಾಡಿದ ಸಂಯುಕ್ತಾ 'ನನಗೆ ಶೋ ಆಫ್ ಮಾಡಿಕೊಳ್ಳಬೇಕೆಂದಿದ್ದರೆ ಇಷ್ಟು ಕಷ್ಟ ಅನುಭವಿಸಿ ಇಲ್ಲಿಯವರೆಗೆ ಬರುವ ಅಗತ್ಯ ನನಗಿರಲಿಲ್ಲ. ರೋಡೀಸ್'ಗೆ ಬರುವುದು ನನ್ನ ಬಾಲ್ಯದ ಕನಸಾಗಿತ್ತು ಇದನ್ನು ನಾನು ಆಡೀಷನ್ ಸಂದರ್ಭದಲ್ಲೇ ಸ್ಪಷ್ಟಪಡಿಸಿದ್ದೇನೆ' ಎಂದು ಮಹಿಳಾ ಸ್ಪರ್ಧಿಗಳ ಬಾಯಿಗೆ ಬೀಗ ಹಾಕಿದ್ದಾರೆ. ಈ ವಿಡಿಯೊ ನೋಡಲು ಇಲ್ಲಿ ನೀಡಿರುವ ವಿಡಿಯೋ ಕ್ಲಿಕ್ ಮಾಡಿ
https://www.voot.com/shows/mtv-roadies-rising/15/479001/hang-in-there-warriors/513684