ಇಂಡಿಯದ ಮೊಸ್ಟ್ ಎಲಿಜಬಲ್ ಬ್ಯಾಚುಲರ್ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕೊನೆಗೂ ಮದುವೆಯಾಗಲಿದ್ದಾರೆ. ಇದೇ ನವೆಂಬರ್ 18ರಂದು ತಮ್ಮ ಗೆಳತಿ ಲೂಲಿಯಾ ನಂಟೂರ್ ಅವರನ್ನು ಸಲ್ಮಾನ್ ಖಾನ್ ವರಿಸಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಲ್ಮಾನ್ ಖಾನ್ ನವೆಂಬರ್ 18ರಂದೇ ವಿವಾಹವಾಗಲು ಹಲವು ಕಾರಣಗಳಿದ್ದು, ನ.18ರಂದೇ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಮತ್ತು ತಾಯಿ ಸಲ್ಮಾ ವಿವಾಹವಾಗಿದ್ದು, ಅಂದೇ ಸಲ್ಮಾನ್ ತಂಗಿ ಅರ್ಪಿತಾ ಖಾನ್ ವಿವಾಹವಾಗಿದ್ದು, ಮದುವೆಯಾದರೆ ನ.18ರಂದೇ ಮದುವೆಯಾಗುವುದಾಗಿ ಸಲ್ಲು ಹೇಳಿದ್ದಾರೆ.

ಮದುವೆ ವಿಷಯ ತಿಳಿದ ಸಲ್ಮಾನ್ ಅಭಿಮಾನಿಗಳು ಒಂದು ಕಡೆ ಫುಲ್ ಖುಷ್ ಆಗಿದ್ದರೇ, ಮತ್ತೊಂದು ಕಡೆ ಫಿಮೇಲ್ ಫ್ಯಾನ್ ದುಃಖಿತರಾಗಿದ್ದಾರೆ. ಸಲ್ಲು ಮದುವೆಗೆ ಕೇವಲ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದೆ. ಕೇವಲ ಸಲ್ಮಾನ್ ಖಾನ್ ಮತ್ತು ಲುಲಿಯಾ ಕುಟುಂಬಸ್ಥರು ಮಾತ್ರ ಮದುವೆಯಲ್ಲಿ ಪಾಲ್ಲೊಳ್ಳಲಿದ್ದಾರೆ. ಬಾಲಿವುಡ್ ದಿಗ್ಗಜರು, ರಾಜಕೀಯ ನಾಯಕರು ಸಲ್ಲು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.