ಮುಂಬೈ[ಜು.14]: ಬಾಲಿವುಡ್ ನಟ ಸಲ್ಮಾನ್ ಖಾನ್ ಮದುವೆಯಾಗಿದ್ದಾರೆ...! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಮದುಮಗನಾಗಿ ಕಾಣಿಸಿಕೊಂಡಿದ್ದಾರೆ. 

ಹೌದು ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಮದುವೆ ಯಾವಾಗ? ಇದು ಅವರ ಅಭಿಮಾನಿಗಳ ನಡುವೆ ಯಾವತ್ತಿಗೂ ಹರಿದಾಡುವ ಹಾಟ್ ಟಾಪಿಕ್. ಬಿಗ್ ಬಾಸ್ ಶೋ ಆಗಲಿ ಅಥವಾ ಸಿನಿಮಾ ಪ್ರೊಮೋಷನ್ ಎಲ್ಲೆಡೆ ಅವರಲ್ಲಿ ಈ ಒಂದು ಪ್ರಶ್ನೆಯನ್ನು ತಪ್ಪದೇ ಕೇಳಲಾಗುತ್ತದೆ. ಆದರೀಗ ವಿಡಿಯೋ ಒಂದು ಲೀಕ್ ಆಗಿದ್ದು, ಇದರಲ್ಲಿ ಅವರು ಮದುವೆಯಾದಂತೆ ಕಂಡು ಬರುತ್ತದೆ. ಅಷ್ಟಕ್ಕೂ ವಧು ಯಾರು? ಇಲ್ಲಿದೆ ನೋಡಿ ವಿಡಿಯೋ ಹಿಂದಿನ ವಾಸ್ತವಾಂಶ.

ಸಲ್ಮಾನ್ ಖಾನ್ ಮದುಮಗನಾಗಿ ಕಾಣೀಸಿಕೊಂಡಿರುವ ವಿಡಿಯೋದಲ್ಲಿರುವ ವಧು ಕತ್ರೀನಾ ಕೈಫ್ ಎಂಬುವುದು ಇನ್ನೂ ಅಚ್ಚರಿ ಮೂಡಿಸುವ ವಿಚಾಋವಾಗಿದೆ. ಸಲ್ಮಾನ್ ನೀಲಿ ಬಣ್ಣದ ಶೇರ್ವಾನಿ ಧರಿಸಿದ್ದರೆ, ಅತ್ತ ಕರ್ತೀನಾ ಕೈಫ್ ಕೆಂಪು ವರ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಇಬ್ಬರೂ ಪರಸ್ಪರ ಮಾಲೆ ಹಾಕುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅಲ್ಲಿ ನೆರೆದಿರುವ ಅತಿಥಿಗಳು ಇಬ್ಬರ ಮೇಲೂ ಹೂವಿನ ಮಳೆಗೈದಿದ್ದಾರೆ.

ಆದರೆ ಈ ವಿಡಿಯೋ ಹಿಂದಿನ ಅಸಲಿಯತ್ತೇನು? ನಿಜಕ್ಕೂ ಸಲ್ಮಾನ್ ಹಾಗೂ ಕತ್ರೀನಾ ಮದುವೆಯಾಗಿದ್ದಾರಾ? ಎಂಬ ಹುಡುಕಾಟ ನಡೆಸಿದಾಗ ಇದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಕತ್ರೀನಾ ಕೈಫ್ ನಟಿಸಿದ್ದ 'ಭಾರತ್' ಸಿನಿಮಾದ ತುಣುಕು ಎಂಬುವುದು ಸ್ಪಷ್ಟವಾಗಿದೆ. ವೈರಲ್ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಲ್ಮಾನ್ ಖಾನ್ ಹಾಗೂ ಕತ್ರೀನಾ ವೃದ್ಧಾಪ್ಯದಲ್ಲಿ ಮದುವೆಯಾಗುತ್ತಿರುವ ಸೀನ್ ಇದು ಎಂದು ತಿಳಿದು ಬರುತ್ತದೆ. 

ಅಂತೂ ಇದು ಇದು ಸಲ್ಮಾನ್ ಖಾನ್ ರಿಯಲ್ ಮದುವೆಯಲ್ಲ, ರೀಲ್ ಮದುವೆ ಎಂಬುವುದು ಖಚಿತವಾಗಿದೆ. ಹೀಗಾಗಿ ಇನ್ನು ಮುಂದೆಯೂ 'ನಿಮ್ಮ ಮದುವೆ ಯಾವಾಗ?' ಎಂಬ ಪ್ರಶ್ನೆಯನ್ನು ಬಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎದುರಿಸಬೇಕಾಗುತ್ತದೆ ಎಂಬುವುದು ಸತ್ಯ.