ಸಾಯಿಕುಮಾರ್‌ ಹೆಸರನ್ನು ಪ್ರತ್ಯೇಕ​ವಾಗಿ ಪರಿಚಯಿಸುವ ಅಗತ್ಯ​ವಿಲ್ಲ. ಅವರು ಖಾಕಿ ಡ್ರೆಸ್‌ಗೆ ತೆರೆ ಮೇಲೆ ಖದರ್‌ ತಂದವರು. ಮತ್ತೆ ಖಾಕಿ ತೊಟ್ಟು ‘ಪಟಾಕಿ'ಯಲ್ಲಿ ಕಾಣಿಸಿಕೊಂಡಿರುವ ಸಾಯಿ ಕುಮಾರ್‌, ನಟ ಗಣೇಶ್‌ ಅವರ ದೊಡ್ಡ ಅಭಿಮಾನಿ ಗೊತ್ತಾ! ಗಣಿ ಬಣ್ಣ ಹಚ್ಚುವ ಮೊದಲೇ ‘ಅಗ್ನಿ' ಸ್ಟಾರ್‌ ಆಗಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸಾಯಿಕುಮಾರ್‌ ಗಣೇಶ್‌ಗೆ ಅಭಿಮಾನಿನಾ ಅಂತ ಅಚ್ಚರಿ ಯಾಗಬೇಡಿ. ತೆರೆ ಮೇಲಿನ ಈ ಕಾಯಂ ಪೊಲೀಸ್‌ ಅಧಿಕಾರಿ, ಗಣೇಶ್‌ ಅಭಿಮಾನಿಯಾಗುವುದಕ್ಕೆ ಕಾರಣ ‘ಮುಂಗಾರು ಮಳೆ'.

ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರದಲ್ಲಿ ಗಣಿ ನಟನೆ ನೋಡಿದ ಮೇಲೆ ಪವರ್‌ಫುಲ್‌ ಕಲಾವಿದ ಸಾಯಿ​ಕುಮಾರ್‌ ಅವರೇ ಅಭಿಮಾನಿ ಆಗಿದ್ದಾರೆ. ಹೀಗೆ ತಾವು ಅಭಿ​ಮಾನಿಸುವ ಗಣೇಶ್‌ ಜತೆಗೆ ‘ಪಟಾಕಿ'ಯಲ್ಲೂ ಪೊಲೀಸ್‌ ಡ್ರೆಸ್‌ ತೊಟ್ಟಿದ್ದಾರೆ. ವಿಶೇಷ ಅಂದರೆ ಇದೇ ಚಿತ್ರದ ಮೂಲಕ ಮೊದಲ ಬಾರಿಗೆ ಗೋಲ್ಡನ್‌ ಸ್ಟಾರ್‌ ಕೂಡ ಖಾಕಿ ಡ್ರೆಸ್‌ನಲ್ಲಿ ಮಿಂಚಿ​ದ್ದಾರೆ. ಅಲ್ಲಿಗೆ ಹೊಸ ಪೊಲೀಸ್‌, ಹಳೇ ಖಾಕಿ ಒಟ್ಟಿಗೆ ಪಟಾಕಿ ಸಿಡಿಸುವುದಕ್ಕೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ ಸಾಯಿ ಕುಮಾರ್‌ ತಾವು ಗಣೇಶ್‌ ಅಭಿಮಾನಿ, ಆ ಚಿತ್ರದಂತೆ ಈ ಚಿತ್ರವೂ ಹಿಟ್‌ ಆಗಲಿದೆ ಎಂದು ಭವಿಷ್ಯ ನುಡಿದರು.

ವರದಿ: ಕನ್ನಡಪ್ರಭ