ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ-ಸಮಂತಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ.

ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ-ಸಮಂತಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ.

ಟಾಲಿವುಡ್ ನಟ ಅಕ್ಕಿನೇನಿ ನಾಗಚೈತನ್ಯ - ನಟಿ ಸಮಂತಾರ ವಿವಾಹ ಇಂದು ನೆರವೇರುತ್ತಿದೆ. ಗೋವಾದಲ್ಲಿ ಶುಕ್ರವಾರ ಹಿಂದೂ ಸಂಪ್ರದಾಯದ ಪ್ರಕಾರ, ಶನಿವಾರ ಕ್ರೈಸ್ತ ಧರ್ಮದ ಪ್ರಕಾರ ನಾಗಚೈತನ್ಯ - ಸಮಂತಾ ದಾಂಪತ್ಯ ಜೀವನ ಪ್ರವೇಶಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಧುಮಗನಾದ ಸಂದರ್ಭದ ಫೋಟೋವನ್ನು ಅವರ ತಂದೆ ನಾಗಾರ್ಜುನ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಫೋಟೋದಲ್ಲಿ ನಾಗಚೈತನ್ಯ ಜೊತೆ ತಂದೆ ನಾಗಾರ್ಜುನ ಸೋದರಮಾವ ನಟ ವೆಂಕಟೇಶ್ ಇದ್ದಾರೆ. ನಾಗಚೈತನ್ಯ ವರನಾಗಿ ಕಳೆಗಟ್ಟಿದ್ದಾರೆ. ಇನ್ನು ಸಮಂತಾ ಹೇಗಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರಿಸುತ್ತಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಮದುವೆಗೆ ಅಕ್ಕಿನೇನಿ ಫ್ಯಾಮಿಲಿಯ ನೂರಕ್ಕೂ ಹೆಚ್ಚು ಬಂಧು ಮಿತ್ರರು ಹಾಜರಾಗುತ್ತಿದ್ದು, ಅಕ್ಟೋಬರ್ 15 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ನೆರವೇರಲಿದೆ.