ನಿರ್ದೇಶಕ ಮಹೇಂದರ್‌ ಜೆಡಿಎಸ್‌ಗೆ

S Mahendhar Join JDS
Highlights

ಸಿನಿಮಾ ವಿತರಕರಾಗಿದ್ದ ಸಮಯದಿಂದಲೂ ಮಹೇಂದರ್‌ ಪರಿಚಯ ಇದೆ. ಅವರ ಹಲವು ಸಿನಿಮಾಗಳಿಗೆ ವಿತರಕನಾಗಿ ಕೆಲಸ ಮಾಡಿದ್ದೇನೆ

ಬೆಂಗಳೂರು(ಫೆ.22): ಕನ್ನಡ ಚಲನಚಿತ್ರ ನಿರ್ದೇಶಕ, ನಟ ಎಸ್‌.ಮಹೇಂದರ್‌ ಅವರು ಕಾಂಗ್ರೆಸ್‌ ತೊರೆದು ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ನಗರದ ಪಕ್ಷದ ಕಚೇರಿ ಜೆಪಿಭವನದಲ್ಲಿ ಬುಧವಾರ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪಕ್ಷದ ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಸಿನಿಮಾ ವಿತರಕರಾಗಿದ್ದ ಸಮಯದಿಂದಲೂ ಮಹೇಂದರ್‌ ಪರಿಚಯ ಇದೆ. ಅವರ ಹಲವು ಸಿನಿಮಾಗಳಿಗೆ ವಿತರಕನಾಗಿ ಕೆಲಸ ಮಾಡಿದ್ದೇನೆ. ಇದೀಗ ಕಾಂಗ್ರೆಸ್‌ ತೊರೆದು ನಾನಾ ಕಾರಣಗಳಿಂದಾಗಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಅವರ ಸೇವೆಯನ್ನು ಪಕ್ಷವು ಪೂರ್ತಿಯಾಗಿ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.

ಪಕ್ಷಕ್ಕೆ ಮಹೇಂದರ್‌ ಅವರು ಯಾವುದೇ ಬೇಡಿಕೆ ಇಟ್ಟು ಬಂದಿಲ್ಲ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಸದುದ್ದೇಶದಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಆಗಮಿಸಿದ್ದಾರೆ ಎಂದರು. ಆದರೂ ಮಹೇಂದರ್‌ ಅವರಿಗೆ ಮೈಸೂರು ಜಿಲ್ಲೆಯ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

loader