ಲಾಸ್‌ಏಂಜಲೀಸ್‌[ಜು.29]: 30 ವರ್ಷಗಳಿಂದ ಡಿಸ್ನಿ ಮಿನ್ನಿ ಮೌಸ್‌ಗೆ ಧ್ವನಿ ನೀಡಿದ್ದ ಹಿರಿಯ ನಟಿ ರಸ್ಸಿ ಟೇಲರ್‌(75) ನಿಧನರಾಗಿದ್ದಾರೆ

ಜಗತ್ತಿನಾದ್ಯಂತ ಚಿರಪರಿಚಿತವಾಗಿದ್ದ ಮಿನ್ನಿ ಪಾತ್ರಕ್ಕೆ ಜೀವ ತುಂಬಿದ್ದು ನಟಿ ರಸ್ಸಿ.ರಸ್ಸಿ ನಿಧನದಿಂದ ಮಿನ್ನಿ ಮಾತು ಕಳೆದುಕೊಂಡಿದೆ.

ರಸ್ಸಿ ಅವರೊಂದಿಗೆ ಇಷ್ಟು ವರ್ಷಗಳ ಕಾಲ ಜತೆಗೂಡಿ ಕೆಲಸ ಮಾಡಿದ್ದು ನಮ್ಮ ಸೌಭಾಗ್ಯ. ಅವರು ನೀಡಿದ ಮನರಂಜನೆ, ಶ್ರಮ ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ಇದು ಮುಂದಿನ ಪೀಳಿಗೆಗೂ ಮಾದರಿ. ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ವಾಲ್ಟ್‌ ಡಿಸ್ನಿ ಕಂಪನಿ ಅಧ್ಯಕ್ಷ ಟ್ವಿಟ್ಟರಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.